ಗಂಡ ಸರಿ ಹೋಗಬಹುದೇ ?

Couch potato doesn't help his wife, horizontal

ಆಸಕ್ತಿಯನ್ನು ಸರಿಯಾಗಿ ಕೇಂದ್ರೀಕರಿಸಿ

ಅದರಲ್ಲೇ ಪರಿಣಿತಿ ಪಡೆದು ಅದನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳುವಷ್ಟು ಮನೋಬಲ ಇಲ್ಲ.

ಪ್ರ : ಅವನನ್ನು ಪಿಯುಸಿಯಿಂದಲೂ ಪ್ರೀತಿಸುತ್ತಿದ್ದೆ. ಅವನ ಮನೆಗೂ ಹೋಗುತ್ತಿದ್ದೆ. ಅವನ ಅಪ್ಪ, ಅಮ್ಮ ಪಾಪದವರು. ನನ್ನನ್ನು ಮಗಳಂತೆ ಟ್ರೀಟ್ ಮಾಡುತ್ತಿದ್ದರು. ನಾನು ಡಿಗ್ರಿ ಮುಗಿದ ತಕ್ಷಣ ಕೆಲಸಕ್ಕೆ ಸೇರಿಕೊಂಡೆ. ಆದರೆ ನನ್ನ ಆ ಹುಡುಗನಿಗೆ ಮೊದಲಿಂದಲೂ ಡ್ಯಾನ್ಸಿಂಗ್, ಆಕ್ಟಿಂಗ್, ಆಂಕರಿಂಗ್ ಇದರಲ್ಲೇ ಆಸಕ್ತಿ. ಅವನು ಲೋಕಲ್ ಚಾನೆಲ್ ಒಂದರಲ್ಲಿ ಪಾರ್ಟ್‍ಟೈಮ್ ಕೆಲಸ ಮಾಡುತ್ತಿದ್ದ. ನೋಡಲು ಸ್ಮಾರ್ಟಾಗಿರುವ ಅವನ ಹಿಂದೆ ಅನೇಕ ಹುಡುಗಿಯರು ಬಿದ್ದರೂ ನನ್ನ ಮೇಲಿನ ಆತನ ಪ್ರೀತಿ ಕಡಿಮೆಯಾಗಿರಲಿಲ್ಲ. ಅವನಿಗೆ ಅಷ್ಟು ಬೇಗ ಮದುವೆಯಾಗಲು ಮನಸ್ಸಿಲ್ಲದಿದ್ದರೂ ನನ್ನ ಮತ್ತು ಮನೆಯವರ ಒತ್ತಾಯಕ್ಕೆ ನಮ್ಮ 24ನೇ ವಯಸ್ಸಿಗೆ ಮದುವೆಯೂ ಆಯಿತು. ಈಗ ಮದುವೆಯಾಗಿ ಎರಡು ವರ್ಷಗಳಾದವು. ನಮ್ಮ ನಡುವೆ ಪ್ರೀತಿ ಇದ್ದರೂ ದಿನಾ ಒಂದಲ್ಲ ಒಂದು ಕಾರಣಕ್ಕೆ ಜಗಳವಾಗುತ್ತಿದೆ. ನನ್ನ ಅಸಮಾಧಾನಕ್ಕೆ ಮುಖ್ಯ ಕಾರಣ ಅವನಿನ್ನೂ ಸೆಟ್ಲ್ ಆಗದೇ ಇರುವುದು. ಅವನಿನ್ನೂ ತನ್ನ ಹವ್ಯಾಸದಲ್ಲಿಯೇ ತೊಡಗಿಕೊಂಡಿದ್ದಾನೆ ವಿನಃ ಯಾವ ಕೆಲಸದಲ್ಲೂ ಹೆಚ್ಚು ಸಮಯ ನಿಲ್ಲುವುದಿಲ್ಲ. ಆದರೆ ವಿಪರೀತ ಖರ್ಚು ಮಾಡುತ್ತಾನೆ. ಅತ್ತೆ, ಮಾವನ ಹತ್ತಿರ ಅಷ್ಟೊಂದು ದುಡ್ಡು ಇಲ್ಲದಿದ್ದರೂ ಒಬ್ಬನೇ ಮಗ ಅಂತ ಏನೇ ಕೇಳಿದರೂ ತೆಗೆಸಿಕೊಡುತ್ತಾರೆ. ಅವನಿಗೆ ಹಣದ ಬೆಲೆಯೇ ಗೊತ್ತಿಲ್ಲ. ನನ್ನ ಯಾವುದೇ ಬುದ್ಧಿ ಮಾತಿಗೂ ಕಿವಿಗೊಡದೇ ಸುಮ್ಮನೇ ರೇಗಾಡುತ್ತಾನೆ. ಹೆಚ್ಚು ಹೇಳಿದರೆ ನಿನ್ನಂತಹ ಡಾಮಿನೇಟಿಂಗ್ ಹುಡುಗಿಯನ್ನು ಮದುವೆಯೇ ಆಗಬಾರದಿತ್ತು ಅಂತಾನೆ. ನನಗೂ ಸಿಟ್ಟು ಬಂದು ಜಗಳವಾಡುತ್ತೇನೆ. ಒಟ್ಟೂ ನೆಮ್ಮದಿ ಇಲ್ಲವಾಗಿದೆ. ಗಂಡ ಸರಿ ಹೋಗಬಹುದಾ?

: ಹುಡುಗ, ಹುಡುಗಿಯ ಮಧ್ಯೆ ಜೀವನದ ಮೌಲ್ಯದ ಬಗ್ಗೆ ಇರುವ ದೃಷ್ಟಿಕೋನದಲ್ಲಿ ತುಂಬಾ ವ್ಯತ್ಯಾಸವಿದ್ದರೆ ಈ ರೀತಿಯ ಜಟಾಪಟಿ ನಡೆಯುತ್ತಿರುತ್ತದೆ. ಮಧ್ಯಮ ಕುಟುಂಬದಿಂದ ಬಂದ ನೀವು ಸಾಮಾನ್ಯವಾಗಿ ಎಲ್ಲರೂ ಇರುವಂತೆ ನಿಮ್ಮ ಸಂಪಾದನೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಖರ್ಚುಮಾಡುತ್ತಾ ನೆಮ್ಮದಿಯ ಜೀವನ ಬಯಸುತ್ತೀರಿ. ಆದರೆ ನಿಮ್ಮ ಗಂಡನಿಗೆ ಐಷಾರಾಮಿ ಜೀವನ ಬೇಕು, ಆದರೆ ಕಷ್ಟಪಟ್ಟು ದುಡಿಯುವುದು ಬೇಡ. ಶೋವಲ್ರ್ಡ್ ಬಗ್ಗೆ ಅತೀವ ಆಸಕ್ತಿ. ಆ ಆಸಕ್ತಿಯನ್ನು ಸರಿಯಾಗಿ ಕೇಂದ್ರೀಕರಿಸಿ ಅದರಲ್ಲೇ ಪರಿಣಿತಿ ಪಡೆದು ಅದನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳುವಷ್ಟು ಮನೋಬಲ ಇಲ್ಲ. ಚಂಚಲಪ್ರವೃತ್ತಿಯ ಅವನ ಮೇಲೆ ನಿಮ್ಮ ಅತ್ತೆ, ಮಾವನಿಗೆ ಕುರುಡು ವ್ಯಾಮೋಹ. ಕೆಲವು ತಂದೆತಾಯಿಯರಿಗೆ ತಾವು ಗಂಜಿ ಕುಡಿದರೂ ಮಕ್ಕಳನ್ನು ಅತಿಯಾಗಿ ಮೆರೆಸುವ ಚಟ. ಅಂತಹ ಮಕ್ಕಳು ಕಷ್ಟದ ಅರಿವೇ ಇರದೇ ತಮ್ಮ ಸ್ವಂತ ಕಾಲಮೇಲೆ ನಿಲ್ಲದಷ್ಟು ದುರ್ಬಲರಾಗುವ ಪ್ರಮೇಯ ಇರುತ್ತದೆ. ನೀವು ಅತ್ತೆ, ಮಾವನಿಗೆ ಮೊದಲು ಈ ವಿಷಯ ತಿಳಿಸಿಹೇಳಿ. ಅವರು ಈ ರೀತಿ ಇನ್ನೂ ಹಣದ ಸಪೋರ್ಟ್ ಮಗನಿಗೆ ಮಾಡುತ್ತಿದ್ದರೆ ಅವನು ಇನ್ನೂ ಜವಾಬ್ದಾರಿ ಕಲಿಯುವುದಿಲ್ಲ ಅಂತ ತಿಳಿಸಿ. ಅವರಾದರೂ ಇನ್ನು ಎಷ್ಟು ವರ್ಷ ಸಹಾಯ ಮಾಡಬಹುದು? ಅವರು ಈಗ ಸ್ವಲ್ಪ ಖಡಕ್ಕಾದರೆ ನಿಮ್ಮ ಗಂಡ ಸರಿಹೋಗಬಹುದು. ಸಾಧ್ಯವಾದರೆ ಸ್ವಲ್ಪ ಸಮಯ ನೀವಿಬ್ಬರೇ ಬೇರೆ ಮನೆ ಮಾಡಿಕೊಂಡಿರುವುದೂ ಒಳ್ಳೆಯದೇ.  ಹೆಂಡತಿಯ ಹತ್ತಿರ ಕೈ ಚಾಚುವುದು ಕಷ್ಟವಾಗಿ ಆಗಲಾದರೂ ಜೀವನದ ಬಗ್ಗೆ ಸೀರಿಯಸ್ ಆಗಬಹುದು.