ದೇಶದಲ್ಲಿ ಡಿಜಿಟಲ್ ವಹಿವಾಟು ಯಶಸ್ಸು ಹೊಂದಲು ಸಾಧ್ಯವೇ

ನಗದುರಹಿತ ವಹಿವಾಟು ಗ್ರಾಮೀಣ ಭಾರತದಲ್ಲಿ ಅಷ್ಟು ಸುಲಭವಲ್ಲ  ನಮ್ಮ ದೇಶ ಹಳ್ಳಿಗಳ ತವರೂರು. ಇಂದಿಗೂ ಸರಾಸರಿ ನೂರಕ್ಕೆ ಅರವತ್ತಕ್ಕಿಂತಲೂ ಹೆಚ್ಚು ಜನರು ಹಳ್ಳಿಗಳಲ್ಲಿಯೇ ವಾಸಿಸುತ್ತಿದ್ದಾರೆ  ಇವರ ಜೀವನದ ಮುಖ್ಯ ಕಸಬುನ್ನಾಗಿ ವ್ಯವಸಾಯವನ್ನೇ ಅವಲಂಬಿಸಿರುತ್ತಾರೆ  ದೇಶದ ಬಹುಭಾಗಗ¼ಲ್ಲಿ ಅನಕ್ಷರತೆ  ಬಡತನ  ಮೂಲಭೂತ ಸೌಕರ್ಯ ಕೊರೆತೆಗಳು ತುಂಬಿ ತುಳುಕಾಡುತ್ತಿದೆ ಹಳ್ಳಿಗಳ ಮಾತಿರಲಿ  ನಗರವಾಸಿಗಳಲ್ಲೇ ಸಾಕಷ್ಟು ತಿಳುವಳಿಕೆ ಇರುವ ಜನರಿಗೆ ಮೊಬೈಲ್ ಬಳಕೆ ಸರಿಯಾಗಿ ಬರುವುದಿಲ್ಲ  ಕೇವಲ ಹೊರಗಿನಿಂದ ಬರುವ ಕರೆಗಳನ್ನು ಸ್ವೀಕರಿಸಲು ಬರುತ್ತವೆಯೇ ಹೊರತು ಹೊರ ಕರೆಗಳನ್ನು ಸರಿಯಾಗಿ ಮಾಡಲು ಬರುವುದಿಲ್ಲ  ನಗರ ವಾಸಿಗಳ ಪರಿಸ್ಥಿತಿಯೇ ಹೀಗಿರುವಾಗ ಇನ್ನು ಗ್ರಾಮೀಣ ಜನರ ಪರಿಸ್ಥಿತಿ ಹೇಳತೀರದು  ದಿನದಿಂದ ದಿನಕ್ಕೆ ತಂತ್ರಜ್ಞಾನ ಎಷ್ಟೇ ಮುಂದುವರೆಯುತ್ತಿದ್ದರೂ ಇವುಗಳಿಂದ ಉಪಯೋಗದ ಜೊತೆ ಅಪಾಯಗಳು ಸಹ ಕಟ್ಟಿಟ್ಟ ಬುತ್ತಿ  ಇಂದಿಗೂ ಸಹ ಸಾಕ್ಷರತೆಯಿಂದ ದೂರ ಉಳಿದು ವಂಚಿತರಾಗಿರುವ ಜನರ ವರ್ಗ ಇರುವ ನಮ್ಮ ದೇಶದಲ್ಲಿ ಇಂತಹ ತಂತ್ರಜ್ಞಾನ ಅಧಾರಿತ ವಹಿವಾಟು ನಿಜವಾಗಿಯೂ ಯಶಸ್ಸು ಹೊಂದಲು ಸಾಧ್ಯವೇ   ಅಂತರ್ಜಾಲ ವಹಿವಾಟುನಲ್ಲಿ ಜನರ ಹಣ ಸಂಪೂರ್ಣ ಸುರಕ್ಷಿತವಾಗಿ ಇರುತ್ತದೆಯೇ   ಏನು ಗ್ಯಾರಂಟಿ
ಇಂತಹ ವ್ಯವಸ್ಥೆಯಿಂದ ಮುಗ್ಧ ಜನರು ಸರಿಯಾದ ತಿಳುವಳಿಕೆ ಕೊರತೆಯಿಂದ ವಂಚಕರ ಜಾಲಕ್ಕೆ ಸಿಲುಕಿ ತಮ್ಮ ಬ್ಯಾಂಕ್ ಖಾತೆ ಹಣವನ್ನು ಕಳೆದುಕೊಂಡರೆ ಬ್ಯಾಂಕಿಂಗ್ ಸಂಸ್ಥೆಯವರಾಗಲೀ  ದೇಶವನ್ನು ಮುನ್ನಡೆಸುತ್ತಿರುವ ನಾಯಕರಾಗಲೀ  ಜವಾಬ್ದಾರಿ ತೆಗೆದುಕೊಳ್ಳುತ್ತಾರೆಯೇ
ಶ್ರೀ ಸಾಮಾನ್ಯರಲ್ಡಿಜಿಟಲ್ ವಹಿವಾಟು ನಡೆಸುವುದು ಅಷ್ಟು ಸುಲಭವಲ್ಲ. ಹೊಸ ತಂತ್ರಜ್ಞಾನ ಬಳಸಿಕೊಂಡು ವಂಚಕರು ಹೊಸ ರೀತಿಯ ಮೋಸಗಳನ್ನು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ  ಸರಕಾರವು ಎಷ್ಟೇ ಕಠಿಣ ಭದ್ರತಾ ಕ್ರಮಗಳನ್ನು ಹೆಚ್ಚಿಸಿದರೂ ಇಂತಹ ವಂಚನೆಗಳ ಸಂಖ್ಯೆ ಕಮ್ಮಿಯಾಗುವ ಬದಲು ಜಾಸ್ತಿಯಾಗುತ್ತಾ ಹೋಗುತ್ತದೆ  ಇಂತಹ ವ್ಯವಸ್ಥೆಗಳನ್ನು ತರಲು ಜನರ ಮೇಲೆ ಒತ್ತಡ ಹೇರುವ ಬದಲು ಅವರವರ ಸಂಪೂರ್ಣ ಆಯ್ಕೆಗೆ ಬಿಡಬೇಕು  ಏನೇ ಆದರೂ ಅಂತರ್ಜಾಲ ವ್ಯವಸ್ಥೆಯಲ್ಲಿ ಜನಸಾಮಾನ್ಯರಿಗೆ ಅವರ ಕಾರ್ಯವೈಖರಿಯ ಬಗ್ಗೆ ಭದ್ರತೆ ಹಾಗೂ ವಿಶ್ವಾಸದ ಕೊರತೆ ಇದ್ದೇ ಇರುತ್ತದೆ
ಈಗಲಾದರೂ ಸಾಕಷ್ಟು ಮುಂಜಾಗ್ರತೆ  ಪೂರ್ವ ಸಿದ್ಧತೆಗಳಿಲ್ಲದೆ ನೋಟ್ ಬ್ಯಾನ್ ಮಾಡಿರುವುದರಿಂದ ಲಕ್ಷಾಂತರ ಜನಸಾಮಾನ್ಯರು ಹಣಕಾಸಿನ ಮುಗ್ಗಟ್ಟಿನಿಂದ ತಮ್ಮ ಹಣಕಾಸಿನ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೆ ಸಂಕಷ್ಟಗಳಿಗೆ ಸಿಲುಕಿ ನಲುಗತ್ತಿರುವುದು ಕಠೋರ ಸತ್ಯ

  • ಎಂ ಸುರೇಶ್ ಕೋಟ್ಯಾನ್  ಫರಂಗಿಪೇಟೆ