ಕ್ಯಾಂಪ್ಕೋ ಕಾರ್ಮಿಕ ಸ್ಪಾಟ್ ಡೆತ್

ಬೈಕಿಗೆ ಪಿಕಪ್ ಡಿಕ್ಕಿ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಬೈಕಿಗೆ ಪಿಕಪ್ ಡಿಕ್ಕಿ ಹೊಡೆದು ಸವಾರ ಪುತ್ತೂರಿನ ಕ್ಯಾಂಪ್ಕೋ ಉದ್ಯೋಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮರೀಲ್ ಸಮೀಪದ ಕಾಡುಮನೆ ಎಂಬಲ್ಲಿ ನಡೆದಿದೆ.

ಮೂಲತಃ ಉತ್ತರ ಕನ್ನಡ ನಿವಾಸಿಯಾಗಿರುವ ರೇವಣ್ಣ (34) ನರಿಮೊಗರು ಮೃತ ಬೈಕ್ ಸವಾರ.

accident 3

ರೇವಣ್ಣರವರು ಮರೀಲನಲ್ಲಿರುವ ಕ್ಯಾಂಪ್ಕೋ ಚಾಕಲೇಟು ಫ್ಯಾಕ್ಟರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಮನೆಯಿಂದ ಫ್ಯಾಕ್ಟರಿಗೆ ತನ್ನ ಬೈಕಿನಲ್ಲಿ ಬರುತ್ತಿದ್ದ ವೇಳೆ ವೀರಂಗಲ ಕಡೆ ತೆರಳುತ್ತಿದ್ದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದಿಂದ ತಲೆಗೆ ಗಂಭೀರ ಗಾಯಗೊಂಡಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.