ಕ್ಯಾಂಪೆÇ್ಕೀದಿಂದ ನೆರವು ಹಸ್ತಾಂತರ

ಕಾಸರಗೋಡು : ಹೃದ್ರೋಗದಿಂದ ಬಳಲುತ್ತಿರುವ ಮುಗು ನಿವಾಸಿ ಮಹಾಲಿಂಗರಿಗೆ ನೀರ್ಚಾಲು ಕ್ಯಾಂಪೆÇ್ಕೀ ಶಾಖೆಯ ವತಿಯಿಂದ ಚಿಕಿತ್ಸಾ ಧನ ಸಹಾಯದ ನೆರವನ್ನು ನೀರ್ಚಾಲು ಕ್ಯಾಂಪೆÇ್ಕೀ ಶಾಖಾ ಪರಿಸರದಲ್ಲಿ ವಿತರಿಸಲಾಯಿತು. ಕ್ಯಾಂಪೆÇ್ಕೀದ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಚಿಕಿತ್ಸಾ ನೆರವಿಗೆ 50 ಸಾವಿರ ರೂ.ಗಳನ್ನು ಮಹಾಲಿಂಗರಿಗೆ ಹಸ್ತಾಂತರಿಸಿದರು. ಬಳಿಕ ಅವರು ಮಾತನಾಡಿ, ಕೃಷಿಕರ ಉತ್ಪನ್ನಗಳ ವ್ಯವಹಾರಕ್ಕೆ ಮಾತ್ರ ಕ್ಯಾಂಪೆÇ್ಕೀ ಸೀಮಿತವಾಗಿಲ್ಲ. ಅದು ಕೃಷಿ, ಕೃಷಿಕರ ಸಮಗ್ರ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ನಿರ್ವಹಿಸುತ್ತಿದ್ದು, ಸದಸ್ಯ ಬೆಳೆಗಾರರ ನೋವು-ನಲಿವುಗಳಿಗೆ ಸ್ಪಂದಿಸುವುದು ಎಂದು ತಿಳಿಸಿದರು.

ಕ್ಯಾಂಪೆÇ್ಕೀದ ಪದಾಧಿಕಾರಿಗಳ ಸಹಿತ ಹಲವರು ಮಂದಿ ಪಾಲ್ಗೊಂಡರು.