ಶಾಲ್ಮಲಾ ನೀರಲ್ಲಿ ಮುಳುಗಿ ಕ್ಯಾಂಪ್ಕೋ ನೌಕರ ಸಾವು

ಶಿರಸಿ : ಶಿವರಾತ್ರಿ ಹಿನ್ನೆಲೆಯಲ್ಲಿ ಸಹಸ್ರಲಿಂಗಕ್ಕೆ ಬಂದಿದ್ದ ಶಿರಸಿಯ ಕ್ಯಾಂಪ್ಕೋ ನೌಕರನು ಮಧ್ಯಾಹ್ನ ಶಾಲ್ಮಲಾ ನದಿಗಿಳಿದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಮಂಗಳೂರು ಮೂಲದ ಹರೀಶ ಚಂದ್ರಶೇಖರ ಆಚಾರಿಯು ಶಿರಸಿಯಲ್ಲಿ ಕ್ಯಾಂಪೆÇ್ಕೀ ಸಂಸ್ಥೆಯ ನೌಕರನಾಗಿದ್ದು, ಮಂಗಳವಾರ ಶಿವರಾತ್ರಿ ಹಿನ್ನೆಲೆಯಲ್ಲಿ ಸಹಸ್ರಲಿಂಗ ಹೋದಾಗ ಈ ಘಟನೆ ನಡೆದಿದೆ. ರಾಜ್ಯದ ವಿವಿಧಡೆಯಿಂದ ಸಹಸ್ರಾರು ಭಕ್ತರು ಸಹಸ್ರಲಿಂಗದ ನದಿಯಲ್ಲಿ ಲಿಂಗಗಳ ಪೂಜೆಗೆ ಬಂದಾಗ ಈ ಘಟನೆ ನಡೆದಿದೆ. ಗ್ರಾಮೀಣ ಪಿಎಸೈ ಶಿವಕುಮಾರ ಹಾಗೂ ಸಿಬ್ಬಂದಿ ತಕ್ಷಣ ಹೋಗಿ ಶವ ಎತ್ತಿ ಶಿರಸಿಗೆ ತಂದಿದ್ದಾರೆ.

LEAVE A REPLY