23 ವಾರದ ಭ್ರೂಣ ಹತ್ಯೆಗೆ ಸುಪ್ರೀಂ ಕೋರ್ಟ್ ನಕಾರ

ಸಾಂದರ್ಭಿಕ ಚಿತ್ರ

ನವದೆಹಲಿ : ಮಹಾರಾಷ್ಟ್ರದ 37 ವರ್ಷ ವಯಸ್ಸಿನ ಮಹಿಳೆಯೊಬ್ಬಳ ಗರ್ಭದಲ್ಲಿ ಬೆಳೆಯುತ್ತಿದ್ದ 23 ವಾರದ ಭ್ರೂಣ ತೆಗೆದುಹಾಕಲು ಸುಪ್ರೀಂ ಕೋರ್ಟ್ ಅನುಮತಿ ನಿರಾಕರಿಸಿದೆ. ಈ ಹಂತದಲ್ಲಿ ಗರ್ಭಪಾತ ಸೂಕ್ತವಲ್ಲ ಎಂದಿರುವ ವೈದ್ಯಕೀಯ ಮಂಡಳಿಯ ವರದಿ ಆಧರಿಸಿ ಕೋರ್ಟ್ ನಿನ್ನೆ ತೀರ್ಪು ಪ್ರಕಟಿಸಿದೆ.

ಗರ್ಭ ಧರಿಸಿದ್ದ ಮಹಿಳೆ ಡೌನ್ ಸಿಂಡ್ರೋಮಿರುವುದು ಪತ್ತೆಯಾಗಿದೆ. ಮುಂಬೈಯ ಕೆಇಎಂ ಆಸ್ಪತ್ರೆಯ ವೈದ್ಯರ ತಂಡವೊಂದು ನೀಡಿರುವ ವರದಿಯಲ್ಲಿ ಮಹಿಳೆಯ ಈ ಗರ್ಭದಲ್ಲಿರುವ ಮಗು ಬದುಕುಳಿಯುವ ಸಾಧ್ಯತೆಗಳಿವೆ ಮತ್ತು ಭ್ರೂಣಹತ್ಯೆ ಮಾಡುವಂತಿಲ್ಲ ಎಂದು ವಿವರಿಸಲಾಗಿದೆ.