ಕಾರ್ನಾಡು ರಸ್ತೆ ಅಗಲೀಕರಣ ತಡೆಗೆ ಶಾಸಕ ಅಭಯಚಂದ್ರ ಮೂಲಕ ಉದ್ಯಮಿಗಳ ಲಾಬಿ

 ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಮುಲ್ಕಿಯಿಂದ ಕಿನ್ನಿಗೋಳಿ-ಕಟೀಲು ಸಂಪರ್ಕಿಸÀುವ ರಸ್ತೆ ಮುಲ್ಕಿಯಿಂದ ಕಟೀಲು, ಬಜಪೆ-ಪೆÇಳಲಿ ಮೂಲಕ ಬಿ ಸಿ ರೋಡಿಗೆ ಸಂಪರ್ಕ ಕಲ್ಪಿಸಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಿದ ಯೋಜನೆ ಸರ್ವೆ ಕಾರ್ಯಕ್ಕೆ ಚಾಲನೆ ದೊರೆಯುತ್ತಿದ್ದಂತೆ ಕಾರ್ನಾಡು ಬಳಿ ಚರಂತಿಪೇಟೆ ಉದ್ಯಮಿಗಳು ಶಾಸಕ ಅಭಯಚಂದ್ರ ಮೂಲಕ ರಸ್ತೆ ಅಗಲೀಕರಣ ನಡೆಸದಂತೆ ಲಾಬಿ ನಡೆಸಿರುವ ಪ್ರಕರಣ ಬಯಲಿಗೆ ಬಂದಿದೆ.

ಕಳೆದ 30-40 ವರ್ಷದಿಂದ ಕಾರ್ನಾಡ್ ಚರಂತಿಪೇಟೆಯಲ್ಲಿ ಫುಟ್ಪಾತ್ ಬಿಡದೆ ಅಕ್ರಮ ರಸ್ತೆ ಬದಿಯಲ್ಲೇ ವ್ಯಾಪಾರ ಮಾಡಿಕೊಂಡು ಬರುತ್ತಿರುವ ಬಟ್ಟೆಯಂಗಡಿ, ಮಿಲ್ಲಿನಂಗಡಿ ಉದ್ಯಮಿಗಳು ಮುಲ್ಕಿಯಿಂದ ಕಿನ್ನಿಗೋಳಿ-ಕಟೀಲು-ಬಜಪೆ-ಪೆÇಳಲಿ ಮೂಲಕ ಬಿ ಸಿ ರೋಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತನೆ ಚಾಲನೆ ನೀಡುತ್ತಿದ್ದಂತೆ ಶಾಸಕ ಅಭಯಚಂದ್ರಗೆ ದುಂಬಾಲು ಬಿದ್ದು ಲಾಬಿ ನಡೆಸಲು ಸಿದ್ಧತೆ ನಡೆಸಿದ್ದಾರೆ. ರಸ್ತೆ ಅಗಲೀಕರಣ ಪ್ರಸ್ತಾಪಿಸಿದ ಕಾಮಗಾರಿಯನ್ನು ಕೈಬಿಡಬೇಕು ಹಾಗೂ ಕಾರ್ನಾಡಿನಿಂದ ಕಿನ್ನಿಗೋಳಿಯವರೆಗೆ ಅಗಲೀಕರಣ ನಡೆಸಿ ಕಾರ್ನಾಡಿನಿಂದ ಧರ್ಮಸ್ಥಾನ ರಸ್ತೆಯಾಗಿ ಮುಲ್ಕಿಯನ್ನು ಪ್ರವೇಶಿಸಬೇಕು ಎಂದು ಚರಂತಿಪೇಟೆ ಉದ್ಯಮಿಗಳು ಲಾಬಿ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ.

ಚರಂತಿಪೇಟೆ ಉದ್ಯಮಿಗಳು ಹಾಗೂ ಬಟ್ಟೆ ಅಂಗಡಿ ಮಾಲಿಕರು ಕಳೆದ ಕೆಲ ವರ್ಷದ ಹಿಂದೆ ಫುಟ್ಪಾತಿನಲ್ಲಿ ಅಕ್ರಮ ವ್ಯಾಪಾರ ನಡೆಸುತ್ತಿರುವ ಬಗ್ಗೆ ಅಂದಿನ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿಗಳಾದ ರಾಯಪ್ಪ ನೋಟಿಸ್ ನೀಡಿದ್ದರೂ ಫಲಕಾರಿಯಾಗದೆ ಅಭಯಚಂದ್ರ ಕೃಪಾಕಟಾಕ್ಷದಿಂದ ಮುಖ್ಯಾಧಿಕಾರಿಯನ್ನೇ ಎತ್ತಂಗಡಿ ಮಾಡಿಸುವಲ್ಲಿ ಸಫಲರಾಗಿದ್ದರು.

ಚರಂತಿಪೇಟೆ ಉದ್ಯಮಿಗಳ ಪ್ರಕಾರ ಕಾರ್ನಾಡಿನಿಂದ ಮುಲ್ಕಿವರೆಗಿನ ರಸ್ತೆ ಪುರಾತನ ಕಾಲದ ಬಂದರು ರಸ್ತೆಯಾಗಿದ್ದು, ರಸ್ತೆ ಅಗಲೀಕರಣ ನಡೆಸುವಂತಿಲ್ಲ ಎಂದು ಹೇಳಿದ್ದಾರೆನ್ನಲಾಗಿದೆ. ರಸ್ತೆ ಅಭಿವೃದ್ಧಿ ತಡೆ ಶಾಸಕ ಅಭಯಚಂದ್ರರ ಮೂಲಕ ಲಾಬಿ ನಡೆಸಿದ ಚರಂತಿಪೇಟೆ ಉದ್ಯಮಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇದಕ್ಕೆ ಬೆಂಬಲ ಸೂಚಿಸಿರುವ ಶಾಸಕ ಅಭಯಚಂದ್ರ ವಿರುದ್ಧವೂ ಜನ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ.