ಬಸ್ಸಿಗೆ ಕಲ್ಲು : ಸಿಬ್ಬಂದಿ ದಿಢೀರ್ ಮುಷ್ಕರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮಾರ್ಪನಡ್ಕ ಸಮೀಪದ ಚಕ್ಕುಡಲ್ ಎಂಬಲ್ಲಿ ಬುಧವಾರ ರಾತ್ರಿ ಬೆಳಿಂಜಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಕಲ್ಲೆಸೆದಿರುವುದನ್ನು ಪ್ರತಿಭಟಿಸಿ ಗುರುವಾರ ಕುಂಬಳೆ ಮುಳ್ಳೇರಿಯಾ ರಸ್ತೆಯ ಗುರುವಾಯೂರಪ್ಪನ್ ಬಸ್ ಸಂಚಾರ ಮೊಟಕುಗೊಳಿಸಿ ಸಿಬ್ಬಂದಿ ದಿಢೀರ್ ಮುಷ್ಕರ ನಡೆಸಿದರು.

ಬುಧವಾರ ರಾತ್ರಿ ಬೆಳಿಂಜಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಗುರುವಾಯೂರಪ್ಪನ್ ಮೇಲೆ ದುಷ್ಕರ್ಮಿಗಳು ಚಕ್ಕುಡಲಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಕಲ್ಲೆಸೆದು ಬೈಕಲ್ಲಿ ಪರಾರಿಯಾಗಿದ್ದರು. ಬಸ್ ಗಾಜುಗಳಿಗೆ ಹಾನಿಯಾಗಿದ್ದು, ಪ್ರಯಾಣಿಕರು, ಬಸ್ ಸಿಬ್ಬಂದಿ ಅದೃಷ್ಟವಶಾತ್ ಪಾರಾದರು.

ರಾ ಹೆದ್ದಾರಿ ಎರಿಯಾಲಿನಲ್ಲೂ ಮಹಾಲಕ್ಷ್ಮೀ ಬಸ್ಸಿಗೆ ಕಲ್ಲೆಸೆತ ನಡೆದಿತ್ತು. ಘಟನೆಯನ್ನು ಖಂಡಿಸಿ ಗುರುವಾಯೂರಪ್ಪನ್ ಬಸ್ ಗುರುವಾರ ಕುಂಬಳೆ-ಮುಳ್ಳೇರಿಯಾ ಸಂಚಾರವನ್ನು ಮೊಟಕುಗೊಳಿಸಿ ಸಿಬ್ಬಂದಿ ಪ್ರತಿಭಟನೆ ವ್ಯಕ್ತಪಡಿಸಿದರು. ಅನಿರೀಕ್ಷಿತ ಮುಷ್ಕರದಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು.