ಮತ್ತೆ ಬಸ್ಸುಗಳ ಮುಟ್ಟುಗೋಲು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅನಧಿಕೃತವಾಗಿ ಓಡಾಡಿಕೊಂಡಿದ್ದ ಹಾಗೂ ಟಿಕೆಟ್ ನೀಡದೇ ಸಂಚರಿಸುತ್ತಿದ್ದ ಮಂಗಳೂರು ನಗರ ಸಾರಿಗೆ ಖಾಸಗಿ ಬಸ್ಸುಗಳ ವಿರುದ್ಧದ ಕಾರ್ಯಾಚರಣೆಯನ್ನು ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ಮತ್ತು ಪೊಲೀಸರು ಮಂಗಳವಾರವೂ ಮುಂದುವರಿಸಿದ್ದು, ಹಲವು ಬಸ್ಸುಗಳನ್ನು ಮುಟ್ಟುಗೋಲು ಹಾಕಿಕೊಂಡರು. ಮುಂಜಾನೆಯಿಂದ ಮಧ್ಯಾಹ್ನದವರೆಗೆ ಕಾರ್ಯಾಚರಣೆ ಮಾಡಿದ ಪೊಲೀಸರು ಹಲವು ಬಸ್ಸುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.