ಹರತಾಳದಲ್ಲಿ ಬಸ್ಸಿಗೆ ಕಲ್ಲೆಸೆತ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪೆÇಲೀಸರು ವಶಕ್ಕೆ ಪಡೆದ ಯುವಕ ಕುಸಿದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಕಾಸರಗೋಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಹ್ವಾನ ನೀಡಿದ ಹರತಾಳ ಪೂರ್ಣಗೊಂಡಿದೆ.

ಹರತಾಳದಿಂದ ಹೊರತುಪಡಿಸಲಾಗಿರುವ ಕುಂಬಳೆ ಹಾಗೂ ಆರಿಕ್ಕಾಡಿಗಳಲ್ಲಿ ಕರ್ನಾಟಕ ಸಾರಿಗೆ ಬಸ್ಸುಗಳಿಗೆ ಕಲ್ಲೆಸೆತವಾಗಿದೆ. ಬೈಕಿನಲ್ಲಿ ಮುಖಕ್ಕೆ ಬಟ್ಟೆ ಕಟ್ಟಿ ಆಗಮಿಸಿದ ವ್ಯಕ್ತಿಗಳು ಕಲ್ಲೆಸೆದು ಗಾಜುಗಳನ್ನು ಹಾನಿಗೊಳಿಸಿರುವುದಾಗಿ ಪ್ರಯಾಣಿಕರು ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಾಸರಗೋಡು ವಿಧಾನಸಭಾ ಕ್ಷೇತ್ರದ ಮಿಕ್ಕ ಸ್ಥಳಗಳಲ್ಲೂ ಅಂಗಡಿಮುಗ್ಗಟ್ಟುಗಳು ಮುಚ್ಚಿಕೊಂಡಿತ್ತು. ಬೆರಳೆಣಿಕೆಯಷ್ಟು ವಾಹನಗಳು ಮಾತ್ರ ರಸ್ತೆಗಿಳಿದಿತ್ತು. ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬಿಜೆಪಿ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.