ಬಸ್ಸು ಮಗುಚಿ ಐವರು ಗಂಭೀರ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ನೆಲ್ಯಾಡಿ ಬಳಿಯ ಕೋಲ್ಪೆಯಲ್ಲಿ ಮಂಗಳವಾರ ಮುಂಜಾನೆ ಮಗುಚಿ ಬಿದ್ದು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಬಸ್ಸಿನಲ್ಲಿದ್ದ ಹಾಸನ ಮೂಲದ ಅನು (39), ಮಂಗಳೂರಿನ ಜಯಂತಿ (45), ಆಂಧ್ರಪ್ರದೇಶದ ಭೂಪಾಲ್ ರೆಡ್ಡಿ (24) ಸೇರಿದಂತೆ ಒಟ್ಟು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮೂವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದರೆ, ಇನ್ನುಳಿದ ಇಬ್ಬರನ್ನು ದೇರಳಕಟ್ಟೆಯ ಆಸ್ಪತ್ರೆಗೆ ಸೇರಿಸಲಾಗಿದೆ.