ಸೂರಜ್ ಎದುರು ಸ್ಟಾಪ್ ಇದ್ದರೂ ಬಸ್ ನಿಲ್ಲಿಸುತ್ತಿಲ್ಲ

ಸುರತ್ಕಲ್ ಸೂರಜ್ ಹೋಟೆಲ್ ಪಕ್ಕ ಕಂಬ್ಲಕೆರೆ ಎಂಬ ಬಸ್ ಸ್ಟಾಪ್ ಹಿಂದಿನಿಂದಲೂ ಇದ್ದು ಇಲ್ಲಿ ಮಂಗಳೂರು ಉಡುಪಿ ಕಟೀಲು ಕಿನ್ನಿಗೋಳಿ ಕಡೆ ಓಡಾಡುವ ಸರ್ವೀಸ್ ಬಸ್ಸುಗಳನ್ನು ಮನಸ್ಸು ಬಂದಂತೆ ನಿಲ್ಲಿಸುವುದು ಕೆಲವೊಮ್ಮೆ ನಿಲ್ಲಿಸದೇ ಮುಂದೆ ಕೊಂಡು ಹೋಗಿ ಪ್ರಯಾಣಿಕರನ್ನು ಇಳಿಸುತ್ತಿರುವ ಬಗ್ಗೆ ದೂರುಗಳ ಮೇಲೆ ದೂರು ಬರತೊಡಗಿದೆ ಈ ಬಸ್ ಸ್ಟಾಪ್ ಪಕ್ಕವೇ ಹೊಸದಾಗಿ ಆರ್ಥೋ ಆಸ್ಪತ್ರೆ ಬೇರೆ ಇರುವುದರಿಂದ ಆಸ್ಪತ್ರೆಗೆ ತಪಾಸಣೆಗೆ ಹೋಗಿ ಬರುವವರಿಗೆ ಬಹಳ ತಾಪತ್ರೆ ಉಂಟು ಮಾಡುತ್ತಿದ್ದಾರೆ ಕೆಲವು ಬಸ್ಸಿನವರು ಜನರನ್ನು ಕಂಡರೆ ಕೈ ಹಿಡಿದಲ್ಲಿ ನಿಲ್ಲಿಸುತ್ತಾರೆ ಆದರೆ ಬಸ್ಸಿನಿಂದ ಇಳಿಯುವಾಗ ಬೇಗ ಬೇಗ ಎಂದು ಗಡಿಬಿಡಿಯಲ್ಲಿ ಬಸ್ಸನ್ನು ಮುಂದೆ ಚಲಿಸುತ್ತಾರೆ ಇದರಿಂದ ರೋಗಿಗಳು ವಯೋವೃದ್ಧರು ಮಕ್ಕಳು ಇಳಿಯುವುದಾದರೂ ಹೇಗೆ ಸಾರಿಗೆ ಅಧಿಕಾರಿಗಳು ಕೂಡಲೇ ಗಮನಿಸಿ ಸುರತ್ಕಲ್ ಸೂರಜ್ ಹೋಟೆಲ್ ಬಳಿ ಇರುವ ಕಂಬ್ಲಕೆರೆ ಬಸ್ ನಿಲ್ದಾಣದಲ್ಲಿ ಎಲ್ಲಾ ಬಸ್ ಸರ್ವಿಸ್ ಬಸ್ಸುಗಳು ಕಡ್ಡಾಯವಾಗಿ ನಿಲ್ಲುವಂತೆ ಎಚ್ಚರಿಕೆ ನೀಡಬೇಕಿದೆ ಹಾಗೊಂದು ವೇಳೆ ಸೂಚನೆ ಧಿಕ್ಕರಿಸಿದರೆ ಅಂತಹ ಬಸ್ಸಿನ ಪರ್ಮಿಟುಗಳನ್ನು ಮುಲಾಜಿಯಿಲ್ಲದೇ ರದ್ದುಪಡಿಸಲು ಹಿಂಜರಿಯಬಾರದು

  • ಕೆ ಚಂದ್ರಹಾಸ  ನಿತ್ಯ ಪ್ರಯಾಣಿಸುವ
    ಪ್ರಯಾಣಿಕರು ಹಲವಾರು ಸಹಿಗಳಿವೆ