ಮಹಿಳಾ ಪೊಲೀಸ್ ಜತೆ ಬಸ್ಸಿನಲ್ಲಿ ಅನುಚಿತ ವರ್ತಿಸಿದ ನಿರ್ವಾಹಕಗೆ ಭರ್ಜರಿ ಗೂಸಾ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಜತೆ ಅನುಚಿತ ವರ್ತನೆ ಮಾಡಿದ ನಿರ್ವಾಹಕನಿಗೆ ಮಹಿಳಾ ಸಿಬ್ಬಂದಿ, ಪ್ರಯಾಣಿಕರು ಭರ್ಜರಿ ಗೂಸಾ ನೀಡಿದ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.

ಉತ್ತರ ಕರ್ನಾಟಕ ಕಡೆಯಿಂದ ಶಿರಸಿಗೆ ಬೆಳಗಿನ ಜಾವ ತಲುಪುವ ಬಸ್ಸಿನಲ್ಲೇ ಮಹಿಳಾ ಪೊಲೀಸ್ ಸಿಬ್ಬಂದಿ ಪ್ರಯಾಣಿಸುತ್ತಿದ್ದು, ನಿರ್ವಾಹಕ ಅನುಚಿತ ವರ್ತನೆಗೆ ಮುಂದಾದಾಗ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಇತರ ಪ್ರಯಾಣಿಕರು ಸಮಾ ಝಾಡಿಸಿದ್ದಾರೆ.

ಬಳಿಕ ಶಿರಸಿ ಬಸ್ ನಿಲ್ದಾಣದಲ್ಲಿ ಬಸ್ ನಿಂತಾಗ ಮಹಿಳಾ ಪೊಲೀಸ್ ಸಿಬ್ಬಂದಿಯು ಶಿರಸಿ ನಗರ ಠಾಣೆಗೆ ನಿರ್ವಾಹಕನನ್ನು ಕರೆದುಕೊಂಡು ನಿರ್ವಾಹಕನು ಮಾಡಿದ ಅನುಚಿತ ವರ್ತನೆ ತಿಳಿಸಿದ್ದು, ಪೊಲೀಸರು ನಿರ್ವಾಹಕರಿಗೆ ಲಾಠಿ ಬೀಸಿ ಮುಟ್ಟಿಸಿದ್ದಾರೆ.

ಬಳಿಕ ಮಹಿಳಾ ಪೊಲೀಸ್ ಸಿಬ್ಬಂದಿಯು ಯಾವುದೇ ದೂರು ನೀಡದ ಕಾರಣ ನಿರ್ವಾಹಕನಿಗೆ ಎಚ್ಚರಿಕೆ ನೀಡಿ ಪೊಲೀಸರು ಕಳುಹಿಸಿದ್ದಾರೆಂದು ಗೊತ್ತಾಗಿದೆ.