ಗ್ಯಾರೇಜಿಗೆ ನುಗ್ಗಿದ ಬಸ್

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿನ ಗ್ಯಾರೇಜಿಗೆ ನುಗ್ಗಿದ ಪರಿಣಾಮ ಗ್ಯಾರೇಜಿನ ಮುಂಭಾಗದಲ್ಲಿ ನಿಲ್ಲಿಸಿದ್ದ 2 ಕಾರುಗಳು ಜಖಂಗೊಂಡಿವೆ.

ಮೂಡಬಿದ್ರೆಯಿಂದ ಕಾರ್ಕಳಕ್ಕೆ ಬರುತ್ತಿದ್ದ ಖಾಸಗಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಸಾಣೂರಿ ಬೈಪಾಸ್ ಬಳಿಯ ಅಬ್ದುಲ್ ಮೊಯ್ದಿನ್ ಎಂಬವರಿಗೆ ಸೇರಿದ ಫ್ರೆಂಡ್ಸ್ ಗ್ಯಾರೇಜಿಗೆ ನುಗ್ಗಿದ ಪರಿಣಾಮ ದುರಸ್ತಿಗೆ ನಿಲ್ಲಿಸಲಾಗಿದ್ದ 2 ಕಾರು ಜಖಂಗೊಂಡಿವೆ.