ಸಾಯುವುದಕ್ಕೆ ಮುಂಚೆ ಲಷ್ಕರ್ ಮುಖ್ಯಸ್ಥ ಹಫೀಜನ ಸಹಾಯ ಕೇಳಿದ್ದ ಬಹ್ರಾನಿ ವಾನಿ

ಚಿತ್ರ ಹಫೀಜ್ ಸಯೀದ್ ಮತ್ತು ಬಹ್ರಾನಿ ವಾನಿ

ನವದೆಹಲಿ : ಭಾರತದ ವಿರುದ್ಧ ಜಿಹಾದ್ ಸಾರಲು ಉಗ್ರ ಒಕ್ಕೂಟ ರಚಿಸಲು ತನಗೆ ಆಶೀರ್ವದಿಸಬೇಕೆಂದು ಕಾಶ್ಮೀರದಲ್ಲಿ ಹತನಾಗುವುದಕ್ಕಿಂತ ಒಂದು ದಿನ ಮುಂಚೆ ಕಾಶ್ಮೀರ ಉಗ್ರಗಾಮಿ ಮುಖಂಡ ಬುಹ್ರಾನಿ ವಾನಿ, ಎಲ್‍ಇಟಿ ಮುಖ್ಯಸ್ಥ ಹಫೀಝ್ ಸಯೀದನಲ್ಲಿ ಸಹಾಯ ಯಾಚಿಸಿದ್ದ ಎಂವ ಆಡಿಯೋ ರೆಕಾರ್ಡ್ ಬಹಿರಂಗಗೊಂಡಿದೆ.

ಸಯೀದ್ ಮತ್ತು ವಾಣಿ ನಡುವಿನ ಸಂಭಾಷಣೆಯನ್ನು ಭಾರತೀಯ ಗುಪ್ತಚರ ಏಜೆನ್ಸಿಗಳು ಮುದ್ರಿಸಿಕೊಂಡಿವೆ.

ಕಾಶ್ಮೀರದಲ್ಲಿರುವ ಎಲ್ ಇ ಟಿ ಉಗ್ರರಿಗೆ ಹಣ, ಅಸ್ತ್ರ ಪೂರೈಕೆ ಬೆಂಬಲ ನೀಡಬೇಕೆಂದು ವಾಣಿ, ಹಫೀಝನಲ್ಲಿ ವಿನಂತಿಕೊಂಡಿದ್ದಾನೆ.

“ನೀವು ಕಷ್ಟದಲ್ಲಿ ಬದುಕುತ್ತಿದ್ದೀರಿ ಎಂದು ನನಗೆ ಗೊತ್ತಿದೆ. ಆದರೆ ಅದಕ್ಕಾಗಿ ನಿರಾಶರಾಗಬೇಡಿ. ನಿಮಗೇನು ಬೇಕು ಎಂದು ಹೇಳಿ, ಅದು ತಕ್ಷಣ ನಿಮ್ಮ ಕೈಸೇರುವುದು. ನಾವು ಯಾವುದಕ್ಕೂ ಸಿದ್ಧವಿದ್ದೇವೆ. ಬರೇ ನೀವು ಹೇಳಿ” ಎಂದು ಹಫೀಝ್ ಭರವಸೆ ನೀಡಿದ್ದಾನೆ.

“ಶತ್ರುಗಳು ಬಹುತೇಕ ಸೋತಿದ್ದಾರೆ ಮತ್ತು ಇದನ್ನೇ ನಾವು ಮುಂದುವರಿಸಿಕೊಂಡು ಹೋಗಲು ಇಚ್ಚಿಸಿದ್ದೇವೆ” ಎಂದು ವಾಣಿ ಹೇಳಿದ್ದಾನೆ.