ಬೀಗ ಜಡಿದ ಮನೆಗೆ ಕಳ್ಳರು ನುಗ್ಗಿ 15,000 ರೂ ನಗದು ದೋಚಿ ಪರಾರಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಪಾಟಿನೊಳಗಿರಿಸಲಾಗಿದ್ದ 15 ಸಾವಿರ ರೂ ನಗದನ್ನು ಕಳವುಗೈದು ಪರಾರಿಯಾದ ಘಟನೆ ಉಪ್ಪಳ ಮಣ್ಣಂಕುಝಿಯಲ್ಲಿ ನಡೆದಿದೆ.

ಉಪ್ಪಳ ಮಣ್ಣಂಕುಝಿ ನಿವಾಸಿ ಹಾಗೂ ಉಪ್ಪಳ ಪೇಟೆಯಲ್ಲಿ ಬಾಳೆ ಹಣ್ಣು ಮಾರಾಟಗಾರನಾಗಿರುವ ಶಂಶುದ್ದೀನ್ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ.

mjr4-theft1

ನಾಲ್ಕು ದಿನಕ್ಕೆ ಮುಂಚಿತವಾಗಿ ಶಂಶುದ್ದೀನ್ ಹಾಗೂ ಕುಟುಂಬ ಸಂಬಂಧಿಕರ ಮನೆಗೆ ತೆರಳಿತ್ತು. ಈ ಸಮಯದಲ್ಲಿ ಕಳವು ನಡೆದಿರಬಹುದಾಗಿ ಶಂಕಿಸಲಾಗಿದೆ. ಗುರುವಾರ ರಾತ್ರಿ ಕುಟುಂಬ ಮರಳಿ ಮನೆಗೆ ಆಗಮಿಸಿದಾಗ ಕಳವು ನಡೆದಿರುವುದು ಗಮನಕ್ಕೆ ಬಂದಿದೆ.

ಮನೆಯ ಹಿಂಬಾಗದ ಕಿಟಿಕಿಯನ್ನು ಮುರಿದು ಒಳನುಗ್ಗಿದ ಕಳ್ಳರು ಮನೆಯ ಮೇಲ್ಬಾಗದಲ್ಲಿ ಹಾಗೂ ಕೆಳ ಅಂತಸ್ತಿನಲ್ಲಿದ್ದ ಕಪಾಟನ್ನು ಮುರಿದು ಜಾಲಾಡಿದಾಗ ಲಭಿಸಿದ ನಗದನ್ನು ಕೊಂಡೊಯ್ದಿದ್ದಾರೆ. ಹಾಸಿಗೆಯ ಕೆಳಭಾಗದಲ್ಲಿ ಇರಿಸಲಾಗಿದ್ದ 5 ಸಾವಿರ ರೂ ಕಳ್ಳರಿಗೆ ಗೋಚರಿಸದ ಹಿನ್ನೆಲೆಯಲ್ಲಿ ಆ ಹಣ ಕಳವಾಗಲಿಲ್ಲ. ಮಂಜೇಶ್ವರ ಠಾಣೆಯಲಿ ದೂರು ದಾಖಲಾಗಿದೆ.