ಕೇಡಿಗಳ ಹತ್ತಿಕ್ಕಲು ಗುಂಡಿಗೆ ಗುಂಡು : ಸೀಎಂ ಯೋಗಿ

ಲಕ್ನೋ : ಕ್ರಿಮಿನಲ್ಲುಗಳ ಅಟ್ಟಹಾಸ ದಮನಿಸಲು ಸರ್ಕಾರ ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎಂದು ಉತ್ತರ ಪ್ರದೇಶ ಸೀಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಹಿಂದಿನ ಸಮಾಜವಾದಿ ಪಕ್ಷದ (ಎಸ್ಪಿ) ಆಡಳಿತದಲ್ಲಿ ಅಪರಾಧಿಗಳು ಮೇಲುಗೈ ಸಾಧಿಸಿದ್ದು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತು ಎಂದರು. “ಉತ್ತರ ಪ್ರದೇಶದಲ್ಲಿ ಈಗ ಪೊಲೀಸರು ಗುಂಡಿಗೆ ಗುಂಡಲ್ಲೇ ಉತ್ತರಿಸುತ್ತಿದ್ದಾರೆ. ಅಪರಾಧಿಗಳನ್ನು ಮಟ್ಟಹಾಕಲು ಹಾಲಿ ಬಿಜೆಪಿ ಸರ್ಕಾರ ಪೊಲೀಸರಿಗೆ ಪೂರ್ಣ ಅಧಿಕಾರ ನೀಡಿದೆ. ಆದರೆ ಹಿಂದಿನ ಎಸ್ಪಿ ಸರ್ಕಾರದಲ್ಲಿ ಪೊಲೀಸರು ಎಲ್ಲ ಸಂದರ್ಭದಲ್ಲೂ ಮೂಕ ಪ್ರೇಕ್ಷಕರಂತೆ ಇದ್ದರು” ಎಂದವರು ತಿಳಿಸಿದರು.