ಬಾವಿಗೆ ಬಿದ್ದ ಹೋರಿ ರಕ್ಷಣೆ

ನಮ್ಮ ಪ್ರತಿನಿಧಿ ವರದಿ

ಕಾರವಾರ : ನಗರದ ನಂದನಗದ್ದಾದ ನೆಲಮಟ್ಟದ ಬಾವಿಗೆ ಬಿದ್ದ ಹೋರಿಯನ್ನು ಅಗ್ನಿಶಾಮಕ ದಳ ಕಾರ್ಯಾಚರಣೆ ಮೂಲಕ ಸೋಮವಾರ ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು.

ವಾಗ್ಳೆವಾಡದ ನಿವಾಸಿ ರಾಮನಾಥ ನಾಯ್ಕ ಮನೆಯ ಎದುರಿನ ನೆಲಮಟ್ಟದ ಬಾವಿಗೆ ಶನಿವಾರ ರಾತ್ರಿ ಹೋರಿ ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹೋರಿಯನ್ನು ಮೇಲಕ್ಕೆತ್ತಲು ಪರದಾಡಿದರು. ಬಳಿಕ ಪಶುವೈದ್ಯರ ಸಹಾಯದಿಂದ ಹೋರಿಗೆ ಅಮಲಿನ ಚುಚ್ಚುಮದ್ದು ನೀಡಿದ ನಂತರ ಹೋರಿಯನ್ನು ನಿಧಾನವಾಗಿ ಮೇಲಕ್ಕೆತ್ತಲಾಯಿತು. ಪಶುವೈದ್ಯಾಧಿಕಾರಿ ಕೃಷ್ಣ ಕೊಚ್ರೆಕರ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹಾಜರಿದ್ದರು.