ಕೋಡಿಕಲ್ ಜನರ ಬದುಕು ದುಸ್ತರ ಮಾಡಿದ ಕಟ್ಟಡ ಕಾಮಗಾರಿ

ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ರಸ್ತೆ ಕಾಂಕ್ರೀಟಿಕರಣ ಹಾಗೂ ಒಳಚರಂಡಿ ಮುಂತಾದ ಕಾಮಗಾರಿಗಳ ಬಗ್ಗೆ ಪೇಪರಿನಲ್ಲಿ ಟೆಂಡರು ಬಂದಿರುತ್ತದೆ  ಈ ಕಾಮಗಾರಿಗಳಿಗೆ ಅಲ್ಲಿಯ ಕಾರ್ಪೋಟರ್ ಯತ್ನ ಇಲ್ಲದಿದ್ದಲ್ಲಿ ಅನುದಾನ ಸಿಗುವುದಿಲ್ಲ  ಆದರೆ ನನಗೆ ಒಂದು ಆಶ್ಚರ್ಯದ ವಿಷಯ ಏನೆಂದರೆ ನಮ್ಮ ಕೋಡಿಕಲ್ ವಾರ್ಡಿಗೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿಯ ಬಗ್ಗೆ ಪೇಪರಿನಲ್ಲಿ ಟೆಂಡರ್ ನೋಡಿದ ನೆನಪಿಲ್ಲ  ಹಾಗೆಂದ ಮಾತ್ರಕ್ಕೆ ನಮ್ಮ ಕಾರ್ಪೋರೇಟರ್ ಎಲ್ಲಾ ಕೆಲಸ ಮಾಡಿದ್ದಾರೆಂದು ಅರ್ಥ ಮಾಡಿಕೊಳ್ಳಬಾರದು  ಇಲ್ಲಿ ಬೇಕಾದಷ್ಟು ಸಮಸ್ಯೆ ಇದೆ  ಮೊದಲನೆಯದಾಗಿ ಕೆಲವು ಕಡೆ ಇನ್ನೂ ಒಳಚರಂಡಿ ವ್ಯವಸ್ಥೆ ಆಗಿರುವುದಿಲ್ಲ. ಕಾರ್ಪೋರೇಟರಲ್ಲಿ ಕೇಳಿದರೆ ಅನುದಾನವಿಲ್ಲ ಎಂದು ಹೇಳುತ್ತಾರೆ  ಇದನ್ನು ಮೊಯ್ದಿದ್ ಬಾವಾರ ಗಮನಕ್ಕೆ ತಂದರೂ ಅವರು ಸ್ಥಳ ವೀಕ್ಷಣೆ ಮಾಡಿ ಹೋದ ಮೇಲೆ ಪತ್ತೆ ಇಲ್ಲತೆರೆದ ಚರಂಡಿಯ ವಿಷಯಕ್ಕೆ ಬಂದರೆ ನಾಗಬನಕ್ಕೆ ಹೋಗುವ ರಸ್ತೆಯ ಮಧ್ಯದಲ್ಲಿ ಒಂದು ಮಳೆ ನೀರು ಹೋಗುವ ಚರಂಡಿ ಇದೆ  ಅದರಲ್ಲಿ ಈಗ ಮಳೆ ನೀರಿನೊಂದಿಗೆ ಎಲ್ಲಾ ನೀರನ್ನು ಬಿಡುತ್ತಾರೆ  ಇದರ ಬಗ್ಗೆ ದೂರು ನೀಡಿದರೂ ಯಾವ ಪ್ರಯೋಜನವೂ ಆಗಲಿಲ್ಲ
ಈಗ ಈ ಚರಂಡಿಯನ್ನು ಇಂಜಿನಿಯರಿಂಗ್ ಕಾಲೇಜಿನವರು ಮಣ್ಣು ಹಾಕಿ ಮುಚ್ಚಿರುತ್ತಾರೆ ಇದನ್ನು ತೆಗೆಸಲು ಹೇಳಿ ಎರಡು ಮಳೆಗಾಲ ಹೋದರೂ ಏನೂ ಪ್ರಯೋಜನವಾಗಲಿಲ್ಲ  ಆದರೆ ಈಗ ಮಣ್ಣು ತೋಡಿನಲ್ಲಿ ತುಂಬಿರುವ ಕಾರಣ ಎಲ್ಲ ಕೊಳಚೆ ನೀರು ಬಂದು ನಿಂತು ವಾಸನೆಯಿಂದ ಅಲ್ಲಿ ವಾಸ ಮಾಡಲು ಸಾಧ್ಯವಾಗುವುದಿಲ್ಲ   ಸಾಯಂಕಾಲ 6 ಗಂಟೆ ಆದರೆ ಸಾಕು ಸೊಳ್ಳೆಗಳು ಕಾಟದಿಂದ ಹೊರಗೆ ಹೋಗುವುದು ಅಸಾಧ್ಯವಾಗಿರುತ್ತದೆ  ಇಲ್ಲಿ ಮಲೇರಿಯಾ ಒಂದೇ ಅಲ್ಲ  ಬೇರೆ ಬೇರೆ ರೀತಿಯ ಖಾಯಿಲೆಗಳು ಬರುವ ಸಾಧ್ಯತೆಗಳು ಇವೆ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಲೇರಿಯಾ ನಿಯಂತ್ರಣಕ್ಕೆ ಒಂದು ಮಾರುತಿ ವ್ಯಾನ್ ಬರುತ್ತದೆ. ಆದರೆ ತೋಡಿನಲ್ಲಿ ನಿಂತ ನೀರನ್ನು ಮತ್ತು ಇಂಜನಿಯರಿಂಗ್ ಕಾಲೇಜಿನವರು ತುಂಬಿದ ಮಣ್ಣನ್ನು ಯಾರಿಗೂ ತೆಗೆಯಲು ಆಗಲಿಲ್ಲ ಎಂದರೆ ವಿಪರ್ಯಾಸವೇ ಸರಿ
ಒಂದು ಕಾಲೇಜು ಕಟ್ಟುವಾಗ ಯಾವೆಲ್ಲ ಮಾನದಂಡ ಪಾಲಿಸಬೇಕು ಎಂಬುದನ್ನು ಇಲ್ಲಿ ಗಾಳಿಗೆ ತೂರಿದ್ದಾರೆ  ಈ ಎಲ್ಲಾ ವಿಷಯವನ್ನು ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಯವರ ಗಮನಕ್ಕೆ ತಂದಿದ್ದು  ನಾಳೆ ಬರುತ್ತೇವೆ  ಎಂದವರು ಎರಡು ತಿಂಗಳಾದರೂ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ  ಇನ್ನಾದರೂ ಈ ತೋಡಿನಲ್ಲಿ ತುಂಬಿರುವ ಮಣ್ಣನ್ನು ತೆಗೆಸಿ ಆ ಕೊಳಚೆ ನೀರನ್ನು ಸರಾಗವಾಗಿ ಹರಿದು ಹೋಗುವ ಹಾಗೆ ತೋಡನ್ನು ಕಾಂಕ್ರೀಟಿಕರಣಗೊಳಿಸಿ ಆಸುಪಾಸಿನ ಜನರನ್ನು ಈ ದುರ್ಗಂಧದಿಂದ ಮುಕ್ತಗೊಳಿಸಿ ಮೋದಿಯವರ ಸ್ವಚ್ಛó ಭಾರತದ ಕನಸಿಗೆ ಕೈ ಜೋಡಿಸಬೇಕಾಗಿ ಪ್ರಾರ್ಥನೆ

  • ವಾಸುಪೂಜಾರಿ
    ಕೋಡಿಕಲ್-ಮಂಗಳೂರು