ಬಿಲ್ಡರಿನಿಂದ ವಂಚನೆ ?

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಸಾಲ್ಮರದಲ್ಲಿರುವ ಸಮೃದ್ಧಿ ಹಿಲ್ಸ್ ವಸತಿ ಸಂಕೀರ್ಣದಲ್ಲಿ ಫ್ಲ್ಯಾಟ್ ನೀಡುವುದಾಗಿ ಕಾರ್ಕಳ ಕುಂಟಲ್ಪಾಡಿಯ ವಸಂತ ಕೋಟ್ಯಾನ್ ಎಂಬವರಿಂದ 20 ಲಕ್ಷ 22 ಸಾವಿರ ಹಣ ಪಡೆದು ಬಳಿಕ ಫ್ಲ್ಯಾಟ್ ನೀಡದೆ ಹಾಗೂ ಪಡೆದ ಹಣವನ್ನು ವಾಪಾಸು ನೀಡದೆ ವಂಚಿಸಿದ್ದಾರೆ ಎಂದು ವಸಂತ ಕೋಟ್ಯಾನ್ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ. ಸುರೇಶ್ ಶೆಟ್ಟಿ, ಬೈರಿ ಶೆಟ್ಟಿ, ಭಾಸ್ಕರ, ಬಾಬುರಾವ್ ಹಾಗೂ ಸತೀಶ್ ಶೆಟ್ಟಿ ಎಂಬವರು ಕಳೆದ 2012ರಿಂದ ವಸತಿ ಸಮುಚ್ಚಯದ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದು, ಇವರುಗಳು ಈ ಹಿಂದೆ ಹಲವು ಜನರಿಂದ ಫ್ಲ್ಯಾಟ್ ನೀಡುವುದಾಗಿ ಹಣ ಪಡೆದು ವಂಚಿಸಿರುವ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.