ಕೋಣ ಕಳವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ 2 ಕೋಣಗಳನ್ನು ಕಳ್ಳರು ಕದ್ದೊಯ್ಯಲಾಗಿದ್ದು. ಬಜ್ಪೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಾಗಿದೆ.

ತಡರಾತ್ರಿ 12ರಿಂದ ಬೆಳಿಗ್ಗೆ 6 ಗಂಟೆಯ ಮಧ್ಯೆ ಈ ಕಳವು ಕೃತ್ಯ ನಡೆಸಲಾಗಿದೆ. ತಾಲೂಕಿನ ಪೆರ್ಮುದೆ ಗ್ರಾಮದ ಪಾರಾಳೆ ಗುತ್ತು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬಳಿ ಇರುವ ಸ್ಥಳೀಯ ನಿವಾಸಿಯೊಬ್ಬರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 2 ಕೋಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಪ್ರಕರಣ ದಾಖಲಾಗಿದೆ.