ನೀರಿನ ಹೊಂಡಕ್ಕೆ ಬಿದ್ದ ಎಮ್ಮೆ ರಕ್ಷಣೆ

ಹೊಂಡಕ್ಕೆ ಬಿದ್ದ ಎಮ್ಮೆಯನ್ನು ರಕ್ಷಿಸುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಕಾರವಾರ : ಅಂಕೋಲಾ ತಾಲೂಕಿನ ಹಟ್ಟಿಕೇರಿಯ ಮಂಡದಕೇರಿಯಲ್ಲಿ ರವಿವಾರ ನೀರು ತುಂಬಿದ ಹೊಂಡಕ್ಕೆ ಬಿದ್ದ ಎಮ್ಮೆಯನ್ನು ವನ್ಯಜೀವಿ ರಕ್ಷಣಾ ತಂಡದ ಮಹೇಶ್ ನಾಯ್ಕ ಮಾರ್ಗದರ್ಶನದಲ್ಲಿ ಸ್ಥಳೀಯರು ಮೇಲಕ್ಕೆತ್ತಿದ್ದಾರೆ.

ಹಟ್ಟಿಕೇರಿಯ ಮಂಡದಕೇರಿ ಹತ್ತಿರದ ನೀರು ತುಂಬಿದ ಹೊಂಡಕ್ಕೆ ಎಮ್ಮೆ ಬಿದ್ದಿದ್ದು, ಮೇಲಕ್ಕೆ ಬರಲಾಗದೇ ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ಮಹೇಶ್ ನಾಯ್ಕ ಅವರಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಅವರು ಸ್ಥಳಿಯರ ಸಹಕಾರದಲ್ಲಿ ಎಮ್ಮೆಯನ್ನು ಸುರಕ್ಷಿತವಾಗಿ ಹಗ್ಗದಿಂದ ಮೇಲೆತ್ತಿದ್ದಾರೆ. ಸ್ಥಳೀಯರಾದ ಉಮೇಶ ನಾಯ್ಕ್, ಲಕ್ಷ್ಮಣ ನಾಯಕ, ಹೊನ್ನಪ್ಪ ನಾಯಕ್, ದ್ಯಾಮಣ್ಣ ಗೌಡ ಭಾಗಿಯಾಗಿ ಸಹಕರಿಸಿದ್ದರು.