ಈಶ್ವರಪ್ಪ ಆಪ್ತ ಸಹಾಯಕನ ಅಪಹರಣ ಹಿಂದೆ ಯಡ್ಡಿ ನಿಕಟವರ್ತಿ ಕೈವಾಡ ?

ಬೆಂಗಳೂರು : ಮೇ 10ರಂದು ನಡೆದಿದ್ದ ಬಿಜೆಪಿ ಮುಖಂಡ ಈಶ್ವರಪ್ಪರ ಆಪ್ತ ಸಹಾಯಕ ವಿನಯ್ ಬಿದರೆ ಅಪಹರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿಯೂರಪ್ಪರ ನಿಕಟವರ್ತಿಯ ಕೈವಾಡವಿದೆ ಎಂದು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದು, ಪ್ರಕರಣಕ್ಕೆ ಹೊಸ ತಿರುವು ಬಂದಿದೆ.

ಬಿದರೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಬಿಜೆಪಿ ಯುವ ಮೋರ್ಚಾದ ಮುಖಂಡ ರಾಜೇಂದ್ರ ಅರಸ್, ಬಿದರೆಯ ಅಪಹರಣ ಸೂತ್ರಧಾರ ಎಂದು ಆರೋಪಿಗಳು ಬಾಯಿ ಬಿಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ನಾಲ್ಕು ದಿನಗಳ ಹಿಂದೆ ರಾಜೇಂದ್ರ ಅರಸಗೆ ಸಮನ್ಸ್ ನೀಡಲಾಗಿದ್ದರೂ ಆತ ನಿರೀಕ್ಷಣಾ ಜಾಮೀನಿನೊಂದಿಗೆ ಮಂಗಳವಾರ ಠಾಣೆಗೆ ಹಾಜರಾಗಿದ್ದಾನೆ. ಮೇ 10ರಂದು ಬೈಕಿನಲ್ಲಿ ಸಾಗುತ್ತಿದ್ದ ವಿಜಯ್ ಅಪಹರಣ ನಡೆದಿದ್ದರೂ, ಆತ ಅಪಹರಣಕಾರರ ವಾಹನದಿಂದ ತಪ್ಪಿಸಿಕೊಂಡು ಪಾರಾಗುವಲ್ಲಿ ಯಶಸ್ವಿಯಾಗಿದ್ದರು.