ಉಚ್ಛ್ಛಾಟಿತ ಬಿಎಸ್ಪಿ ಮುಖಂಡನಿಗೆ ಮಾಯಾವತಿ ಕೋಟಿ ಬೇಡಿಕೆ

ಲಕ್ನೋ : ಮಾಧ್ಯಮದ ಮುಂದೆ ಬಿಎಸ್‍ಪಿ ಅಧ್ಯಕ್ಷೆ ಮಾಯಾವತಿ ವಿರುದ್ಧ ಸರಣಿ ಆರೋಪ ಮಾಡಿರುವ ಬಿಎಸ್‍ಪಿ  ಮಾಜಿ ನಾಯಕ ನಸೀಮುದ್ದೀನ್ ಸಿದ್ದಿಕಿಯನ್ನು ಅವರ ಪುತ್ರನ ಸಹಿತ ಪಕ್ಷದಿಂದ ಉಚ್ಚಾಟಿಸಲಾಗಿದೆ. ತನ್ನ ಆಸ್ತಿ ಮಾರಾಟ ಮಾರಿಯಾದರೂ 50 ಕೋಟಿ ರೂ ಲಂಚ ನೀಡಬೇಕೆಂದು ಮಾಯಾವತಿ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿದ ಸಿದ್ದಿಕಿಯನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಇವರು ಕಳೆದ 34 ವರ್ಷದಿಂದ ಪಕ್ಷದ ನಾಯಕರಾಗಿದ್ದರು.