ಸೋದರಿಗೆ ಗರ್ಭದಾನ ಮಾಡಿದವನ ಶಿಶ್ನ ತುಂಡರಿಸಿ, ತಲೆ ಕಡಿದ ಸೋದರರು

ಸಾಂದರ್ಭಿಕ ಚಿತ್ರ

 ಬೆಂಗಳೂರು : ತಮ್ಮ ಅವಿವಾಹಿತ ಸೋದರಿಯ ಜತೆ ಸಂಬಂಧ ಹೊಂದಿ ಆಕೆಗೆ ಗರ್ಭದಾನ ಮಾಡಿದ  ವ್ಯಕ್ತಿಯೊಬ್ಬನ ಶಿಶ್ನವನ್ನು ತುಂಡರಿಸಿ ತಲೆ ಕಡಿದು ಕೊಂದ ಆರೋಪದ ಮೇಲೆ ಯುವತಿಯ ಇಬ್ಬರು ಸಹೋದರರನ್ನು ಬಂಧಿಸಲಾಗಿದೆ. ಘಟನೆ ಸೆಪ್ಟೆಂಬರ್ 10ರಂದು ಎಲೆಕ್ಟ್ರಾನಿಕ್ ಸಿಟಿ ಸಮೀಪವಿರುವ ದೊಡ್ಡತೊಗೂರು ಎಂಬಲ್ಲಿ ನಡೆದಿದೆ.

ಆರೋಪಿಗಳನ್ನು ಗಾಂಧಿ ಜೆರಾಯ್ (19) ಹಾಗೂ ಮಧು ಜೆರಾಯ್ (21) ಎಂದು ಗುರುತಿಸಲಾಗಿದೆ. ಅವರ ಭಾವ ಕೂಡ ಈ ಕೊಲೆಯಲ್ಲಿ ಭಾಗಿಯಾಗಿದ್ದಾನೆನ್ನಲಾಗಿದ್ದು ಆತ ತಲೆಮರೆಸಿಕೊಂಡಿದ್ದಾನೆ. ಮೃತಪಟ್ಟವನು ಒಡಿಶಾದವನೇ ಆದ ಬಿರಾಂಚಿ ಮಂಝಿ. ಆತನ ಕೊಲೆ ನಡೆಸಿದ ನಂತರ ಆರೋಪಿಗಳು ಆತನ ತಲೆ ಕಡಿಯಲ್ಪಟ್ಟ ಸ್ಥಿತಿಯಲ್ಲಿದ್ದ ದೇಹವನ್ನು ನಿರ್ಜನ ಪ್ರದೇಶವೊಂದರಲ್ಲಿ ಎಸೆದು ಅದನ್ನು ಹುಲ್ಲಿನಿಂದ ಮುಚ್ಚಿದ್ದರು. ಶ್ವಾನ ಪಡೆಯ ಸಹಾಯದಿಂದ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.