ಅಶ್ವತ್ಥಕಟ್ಟೆ ಬುಡದಲ್ಲಿ ಒಡೆದ ದೇವರ ಚಿತ್ರಗಳು ಸಿಕ್ಕಾಪಟ್ಟೆ

ಕರಾವಳಿಯ ಯಾವುದೇ ದೇವಸ್ಥಾನದ ವಠಾರ ಅಥವ ಸಾರ್ವಜನಿಕ ವಲಯದಲ್ಲಿರುವ ಅಶ್ವಥ ಕಟ್ಟೆಗಳಲ್ಲಿ ಒಡೆದ ದೇವರ ಫೋಟೋಗಳ ರಾಶಿ ಬಿದ್ದಿರುತ್ತದೆ  ಕೆಲವರು ಮನೆಯ ದೇವರ ಕೊಣೆಯಲ್ಲಿ  ಪೂಜಿಸಲು ದೇವರ ಹಲವು ರೀತಿಯ ಫೋಟೋಗಳನ್ನು ಬಳಸುತ್ತಾರೆ  ಫೋಟೋದ ಫ್ರೇಮಿಗೆ ಗೆದ್ದಲು ಹಿಡಿದೋ ಅಥವ ಗಾಜು ಒಡೆದು ಹಾಳಾದ ಸಂಧರ್ಭದಲ್ಲಿ  ಅದನ್ನು ಕೆಲವರು ಸಾರ್ವಜನಿಕ ವಲಯದಲ್ಲಿರುವ ಅಶ್ವಥ ಕಟ್ಟೆಯ ಬುಡಕ್ಕೆ ತಂದು ಹಾಕುತ್ತಾರೆ  ಅದರ ಪರಿಣಾಮ ಮುಂಜಾನೆಯ ಮಬ್ಬುಗತ್ತಲಿನ ಸಮಯದಲ್ಲಿ  ಭಕ್ತಿಯ ನಂಬಿಕೆಯಲ್ಲಿ ಅಶ್ವಥ ಮರಕ್ಕೆ ಪ್ರದಕ್ಷಿಣೆ ಹಾಕುವ ಜನರಿಗೆ ಕಾಲಿಗೆ ಫೋಟೋದ ಗಾಜುಗಳು ತಾಗಿ ಗಾಯಗೊಳ್ಳುವ ಸಂಭವ ಹೇಚ್ಚು  ಬೀದಿ ನಾಯಿಗಳು ದೇವರ ಫೋಟೋಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತವೆ  ಮರದ ಬುಡದಲ್ಲಿ ಒಡೆದ ಫೋಟೋಗಳು ಸಂಗ್ರಹಗೊಂಡು  ಕಸದ ರಾಶಿಯಾಗಿ ಪರಿಸರದ ಅಂದವು ಕೆಡುತ್ತದೆ ಭಯದಿಂದ  ಫೋಟೋದ ವಿಲೇವಾರಿ ಮಾಡಲು ಜನ ಹಿಂಜರಿಯುತ್ತಾರೆ
ಹಾಗಾಗಿ ಆಸ್ತಿಕ ಬಾಂಧವರು ಹಾಳಾದ ದೇವರ ಗಳನ್ನು ಸಾರ್ವಜನಿಕ ಪ್ರದೇಶದಲ್ಲಿರುವ ಅಶ್ವಥ ಕಟ್ಟೆಗಳಲ್ಲಿ ಇಡದೆ  ಸಾದ್ಯವಾದಷ್ಟು ಫೋಟೋಗಳನ್ನು ರಿಪೇರಿ ಅಂಗಡಿಗಳಲ್ಲಿ ದುರಸ್ಥಿಪಡಿಸಿ ಪೂಜೆಗೆ ಉಪಯೋಗಿಸುದು ಉತ್ತಮ

  • ತಾರಾನಾಥ್ ಮೇಸ್ತ  ಶಿರೂರು