ಬ್ರಿಟಿಷ್ ಶಿಕ್ಷಣ ವ್ಯವಸ್ಥೆ ಬದಲಾವಣೆ ಅಗತ್ಯ

ಗೋವಾ ಸೀಎಂ ಪರಿಕ್ಕರ್ ಪ್ರತಿಪಾದನೆ 

ನಮ್ಮ ಪ್ರತಿನಿಧಿ ವರದಿ

ಸಿದ್ದಾಪುರ (ಉ ಕ) : “ದೇಶದಲ್ಲಿ ಸಾಕಷ್ಟು ಯುವಪ್ರತಿಭೆಗಳಿದ್ದು, ಅವರಿಗೆ ಸೂಕ್ತ ಅವಕಾಶ ನೀಡುವ ಜೊತೆಗೆ ಅವರಲ್ಲಿರುವ ಮಾನವ ಸಂಪನ್ಮೂಲಗಳನ್ನು ಸೂಕ್ತ ರೀತಿ ಬಳಸುವ ಕಾರ್ಯ ಆಗಬೇಕಿದೆ. ಬ್ರಿಟಿಷ್ ಆಧಾರಿತ ಶಿಕ್ಷಣ ವ್ಯವಸ್ಥೆ ಬದಲಾಗುವ ಅಗತ್ಯವಿದೆ” ಎಂದು ಗೋವಾ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಹೇಳಿದರು.

ಅವರು ಭಾನುವಾರ ಸಂಜೆ ಸಿದ್ದಾಪುರದ ದಿ ವೇದಮೂರ್ತಿ ಶ್ರೀ ಸರ್ವೋತ್ತಮ ಕೃಷ್ಣ ಭಟ್ಟ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ 25ನೇ ಕಣ್ಣಿನ ತಪಾಸಣಾ ಶಿಬಿರ, ಗ್ರಂಥಾಲಯ ಹಾಗೂ ಕಂಪ್ಯೂಟರ್ ಶಿಕ್ಷಣ ಕೇಂದ್ರ ಉದ್ಘಾಟಿಸಿ ಮಾತನಾಡುತ್ತಿದ್ದರು. “ಬ್ರಿಟಿಷರ ಶಿಕ್ಷಣವು ನಮ್ಮ ಆಂತರಿಕ ವಿಚಾರ ಶೈಲಿ ಬದಲಾಯಿಸಿದೆ. ಶಿಕ್ಷಣ ಕೇವಲ ಸರ್ಟಿಫಿಕೇಟಿಗೆ ಸೀಮಿತವಾಗಬಾರದು. ಇದರಿಂದ ಉತ್ತಮ ನಾಗರಿಕರ ನಿರ್ಮಾಣ ಆಗುವುದಿಲ್ಲ. ಶಿಕ್ಷಣವು ನಮಗೆ ಬದುಕಿನ ದಾರಿ ಆಗುವ ಜೊತೆಗೆ ಸಂಸ್ಕಾರ ನೀಡಬೇಕು. ಶಿಕ್ಷಣದ ದಾರಿಯ ಮೂಲಕ ಮತ್ತು ನಮ್ಮ ಸಾಮಥ್ರ್ಯದ ಮೂಲಕ ನಾವು ಬದಲಾವಣೆ ತರಬೇಕಿದೆ. ನಮ್ಮ ಮೈಂಡ್ಸೆಟ್ ಬದಲಾಯಿಸಿಕೊಳ್ಳುವ ಅಗತ್ಯವಿದೆ. ಏನಾದರೂ ಬದಲಾವಣೆ ಮಾಡಬೇಕೆಂಬ ನಿರಂತರ ಪ್ರಯತ್ನ ಇಂದಿನ ಯುವಜನಾಂಗದಲ್ಲಿ ಬರಬೇಕು” ಎಂದರು.