ಹೊನ್ನಾವರಕ್ಕೆ ಬ್ರಿಟಿಷ್ ರಾಯಭಾರಿ ಭೇಟಿ

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ : ಬ್ರಿಟಿಷ್ ರಾಯಭಾರಿ ಡೊಮಿಕ್ ಎಂ ಸಿ ಆಲಿಸ್ಟರ್ ಮಂಗಳವಾರ ತಾಲೂಕಿಗೆ ಭೇಟಿ ನೀಡಿದರು. ಜಿಲ್ಲಾಡಳಿತದ ಪರವಾಗಿ ಭಟ್ಕಳ ಉಪವಿಭಾಗಾಧಿಕಾರಿ ಎನ್ ಎಂ ಮಂಜುನಾಥ ಬರಮಾಡಿಕೊಂಡರು.

ಇಲ್ಲಿನ ಜಗತ್ಪ್ರಸಿದ್ಧ ಜೋಗ ಜಲಪಾತಕ್ಕೆ ಭೇಟಿ ನೀಡಿ ನಂತರ ಹೊನ್ನಾವರಕ್ಕೆ ಪಟ್ಟಣಕ್ಕೆ ಆಗಮಿಸಿ ನಂತರ ಬ್ರಿಟಿಷ ರಾಯಭಾರಿಯವರೊಂದಿಗೆ ಉಪವಿಭಾಗಾಧಿಕಾರಿ ಎನ್ ಎಂ ಮಂಜುನಾಥ 30 ನಿಮಿಷ ಉಭಯ ಕುಶಲೋಪರಿ ನಡೆಸಿದರು. ಜಿಲ್ಲೆಯ ವಿವಿಧ ಪರಿಸರ ವೈವಿಧ್ಯತೆ, ಸಾಂಸ್ಕøತಿಕ ಮುಂತಾದ ವಿಷಯಗಳ ಬಗ್ಗೆ ಸಮಾಲೋಚಿಸಿದರು. ಜಿಲ್ಲೆಯ ವತಿಯಿಂದ ಇಲ್ಲಿನ ಸಾಂಬಾರು ಪದಾರ್ಥಗಳುಳ್ಳ ವಿಶೇಷ ಪೊಟ್ಟಣ ಉಡುಗೊರೆಯಾಗಿ ನೀಡಿದರು. ಉಭಯ ದೇಶಗಳೊಂದಿಗಿನ ಉತ್ತಮ ಸಂಬಂಧದ ಬಗ್ಗೆ ಡೊಮಿಕ್ ಎಂ ಸಿ ಆಲಿಸ್ಟರ್ ಹರ್ಷ ವ್ಯಕ್ತಪಡಿಸಿದರು. ಉಪತಹಶೀಲ್ದಾರ ಸತೀಶ ಗೌಡ, ಕಂದಾಯ ನೀರಿಕ್ಷಕ ಪಾಟಿಲ್, ಕೇಶವ ನಾಯ್ಕ, ಮಹೇಂದ್ರ ಗೌಡ, ಗೋಪಾಲಕೃಷ್ಣ ಭಟ್ ಮತ್ತಿತರÀರಿದ್ದರು.