ಪ್ರಾಣಿ ಕೊಬ್ಬಿರುವÀ 5 ಪೌಂಡ್ ನೋಟು ಬಹಿಷ್ಕರಿಸಲು ಬ್ರಿಟನ್ ಹಿಂದೂ ದೇವಳ ಚಿಂತನೆ

ಲಂಡನ್ : ಲೀಕೆಸ್ಟರ್ ನಗರದಲ್ಲಿರುವ ದೇಶದ ಅತ್ಯಂತ ದೊಡ್ಡ ಹಿಂದೂ ದೇವಳಗಳಲ್ಲೊಂದಾಗಿರುವ ಸನಾತನ ಮಂದಿರಕ್ಕೆ ಬರುವ ಭಕ್ತಾದಿಗಳು  ಹೊಸ 5 ಪೌಂಡ್ ನೋಟುಗಳನ್ನು ಕಾಣಿಕೆಯಾಗಿ ನೀಡದಂತೆ ದೇವಳದ ಆಡಳಿತ ಮಂಡಳಿ ವಿನಂತಿಸಿದೆ. ನೋಟಿನಲ್ಲಿ ಪ್ರಾಣಿಯ ಕೊಬ್ಬಿನಂಶ ಇರುವುದೆಂದು ಬ್ಯಾಂಕ್ ಆಫ್ ಇಂಗ್ಲೆಂಡ್ ಹೇಳಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

“ನೋಟಿನಲ್ಲಿ ಉಪಯೋಗಿಸಲಾಗಿರುವ ಪಾಲಿಮರ್ ಪೆಲ್ಲೆಟ್ಟಿನಲ್ಲಿ  ಕೊಬ್ಬಿನಂಶ ಪತ್ತೆಯಾಗಿದೆ ಎಂಬುದನ್ನು ಬ್ಯಾಂಕ್ ಈಗಾಗಲೇ ದೃಢೀಕರಿಸಿದೆ. ಹೆಚ್ಚಿನ  ಹಿಂದೂಗಳು ಸಸ್ಯಾಹಾರಿಗಳಾಗಿರುವುದರಿಂದ ಹಾಗೂ ಅವರು ಪ್ರಾಣಿಗಳಿಗೆ ತೊಂದರೆಯುಂಟು ಮಾಡುವುದರ ವಿರೋಧಿಗಳಾಗಿರುವುದರಿಂದ ದೇವಳ ಈ ನೋಟುಗಳನ್ನು ಬಹಿಷ್ಕರಿಸಲು ಯೋಚಿಸುತ್ತಿದೆ” ಎಂದು ದೇವಳದ ಅಧ್ಯಕ್ಷೆ ವಿಭೂತಿ ಆಚಾಂiÀರ್i ತಿಳಿಸಿದ್ದಾರೆ. ಸಮಾಜ ಕಲ್ಯಾಣದ ಉದ್ದೇಶಕ್ಕಾಗಿ ಈ ಹಿಂದೂ ದೇವಳ ದೇಣಿಗೆಗಳನ್ನು ಸ್ವೀಕರಿಸುತ್ತದೆ.

ಲೀಕೆಸ್ಟರ್ ನಗರದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಹಿಂದೂಗಳು ವಾಸಿಸುತ್ತಿದ್ದು 5 ಪೌಂಡು ನೋಟಿನಲ್ಲಿರುವ ಕೊಬ್ಬಿನಂಶ ತೆಗೆದು ಹಾಕಬೇಕೆಂಬ ದೂರು ಅರ್ಜಿಗೆ  ಇಲ್ಲಿಯ ತನಕ 50,000 ಮಂದಿ ಸಹಿ ಹಾಕಿದ್ದಾರೆ.