ಇನ್ನಾದರೂ ಒಳ್ಳೆ ಸಿನಿಮಾ ಮಾಡಿರಿ

ಬಂಗಾರದ ಮನುಷ್ಯ, ಶರಪಂಜರ, ಶಂಕರ್ ಗುರು, ಮೇಯರ್ ಮುತ್ತಣ್ಣ, ಭಕ್ತ ಕುಂಬಾರ, ಬೆಸುಗೆ, ಗೆಜ್ಜೆಪೂಜೆ, ತುಳಸಿ, ಹೀಗೆ ಉತ್ತಮ ಚಿತ್ರಗಳು ಈಗ ಎಲ್ಲಿದೆ  ಅಂಥ ನಿರ್ದೇಶಕರು ಎಲ್ಲಿ  ಅಂತಹ ಸಂಗೀತದ ಚಿತ್ರಗಳು, ಹಾಡುಗಳು ಎಲ್ಲಿ  ಈಗ ಬರುತ್ತಿರುವ ಕನ್ನಡ ಚಿತ್ರಗಳಿಗೆ ಅಸಹ್ಯ ಹೆಸರುಗಳು, ತಲೆ ಬುಡವಿಲ್ಲದ ಕಥೆಗಳು, ನಿರ್ದೇಶನ ಗೊತ್ತಿಲ್ಲದ ನಿರ್ದೇಶಕರುಗಳು, ಎಲ್ಲಿಗೆ ಬಂತು ಕನ್ನಡ ಚಿತ್ರ ರಂಗದ ದುರ್ಗತಿ. ಒಂದೆಡೆ ಟೀವಿ ಧಾರಾವಾಹಿಗಳು, ಇನ್ನೊಂದೆಡೆ ಕ್ರಿಕೆಟ್ ಆಟದ ಹುಚ್ಚು. ಇನ್ನೊಂದೆಡೆ ಮೊಬೈಲ್ ಗೇಮಿನಲ್ಲಿ ಮುಳುಗಿದ ಜನತೆ ಹೀಗೆ ಕಾರಣ ಹಲವಾರು ಇನ್ನಾದರೂ ಒಳ್ಳೆ ಸಂದೇಶದ ಎಲ್ಲರೂ ನೋಡುವಂತಹ ಚಿತ್ರ ಮಾಡಿರಿ

  • ಬಿ ಕೌಶಿಕ್  ಪುತ್ತೂರು