ಗೋಮಾಂಸ ಖಾದ್ಯ ಬೇಕೆಂದ ವರನ ಕುಟುಂಬ ; ವಿವಾಹವನ್ನೇ ರದ್ದುಪಡಿಸಿದ ಹೆಣ್ಣಿನ ಹೆತ್ತವರು

 ರಾಂಪುರ : ನಿಕಾಹ್ ಸಮಾರಂಭದಲ್ಲಿ ತಮಗೆ ಗೋಮಾಂಸದ ಭಕ್ಷ್ಯಗಳನ್ನು ಪೂರೈಸಬೇಕು ಎಂದು ವರನ ಕಡೆಯವರು ಬೇಡಿಕೆಯಿಟ್ಟಿದ್ದನ್ನು ವಿರೋಧಿಸಿ ವಧುವಿನ ಕುಟುಂಬ ವಿವಾಹವನ್ನೇ ರದ್ದುಗೊಳಿಸಿದ ಘಟನೆ ದರಿವಘರ್ ಎಂಬ ಗ್ರಾಮದಲ್ಲಿ ನಡೆದಿದೆ.

ನಮ್ಮ ಕಡೆಯವರಿಗೆ ಗೋಮಾಂಸ ಭಕ್ಷ್ಯಗಳನ್ನು ಸಿದ್ಧಪಡಿಸಿ ಇಲ್ಲವೇ ವಿವಾಹ ರದ್ದತಿಗೆ ಸಿದ್ಧವಾಗಿ ಎಂದು ವರನ ಕಡೆಯವರ ಷರತ್ತಿನಿಂದ ಬೇಸತ್ತ ಹೆಣ್ಣಿನ ಕಡೆಯವರು ಮಗಳ ವಿವಾಹವನ್ನೇ ರದ್ದುಗೊಳಿಸಿದರು. ವರನ ಕುಟುಂಬ ಕಾರು ಒಂದನ್ನು ನೀಡುವಂತೆಯೂ ಬೇಡಿಕೆಯಿಟ್ಟಿತ್ತೆನ್ನಲಾಗಿದ್ದು ಅದನ್ನೂ ಈ ಹಿಂದೆಯೇ ತಿರಸ್ಕರಿಸಲಾಗಿತ್ತು.

ವರನ ಹೆತ್ತವರು ಹಾಗೂ ಇನ್ನಿತರ ಕೆಲವರ ವಿರುದ್ಧ ವಧುವಿನ ಕಡೆಯವರು ಪೊಲೀಸ್ ದೂರು ದಾಖಲಿಸಿದ್ದಾರೆ.