ಎಚ್ಡೀಕೆಯನ್ನು ಮತ್ತೆ ಕಾಡಲಿರುವ ರೂ 150 ಕೋಟಿ ಗಣಿ ಪ್ರಕರಣ

ಬೆಂಗಳೂರು : ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಇನ್ನಷ್ಟು ಕಂಟಕಗಳು ಎದುರಾಗಲಿವೆಯೆಂಬ ಸೂಚನೆಯೆಂಬಂತೆ  ಅಕ್ರಮ ಗಣಿಗಾರಿಕೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‍ಐಟಿ) ಇದೀಗ ಗಣಿಗಾರಿಕೆಗೆ ಅನುಮತಿ ನೀಡುವ ಸಲುವಾಗಿ ಅವರು ಪಡೆದಿದ್ದಾರೆನ್ನಲಾದ ರೂ 150 ಕೋಟಿ ಲಂಚದ ಕೇಸನ್ನು ಮತ್ತೆ ತನಿಖೆ ನಡೆಸಲು ನಿರ್ಧರಿಸಿದೆ.

ಈ ಲಂಚದ ಡೀಲ್ ಬಗ್ಗೆ ಚರ್ಚಿಸಿದ್ದ  ಆಗಿನ ಸಚಿವ ಚೆನ್ನಿಗಪ್ಪ ಸೇರಿದಂತೆ  ಕುಮಾರಸ್ವಾಮಿಗೂ ತನಿಖಾ ತಂಡ ಸದ್ಯದಲ್ಲಿಯೇ ಸಮನ್ಸ್ ನೀಡುವ ಸಾಧ್ಯತೆಯಿದೆನ್ನಲಾಗಿದೆ.

ಆಗ ವಿಧಾನ ಪರಿಷತ್ ಸದಸ್ಯರಾಗಿದ್ದ ಮಾಜಿ ಸಚಿವ  ಜನಾರ್ದನ ರೆಡ್ಡಿ ಈ ಲಂಚದ ಆರೋಪ ಹೊರಿಸಿದ್ದರಲ್ಲದೆ ಚನ್ನಿಗಪ್ಪ ಅವರು ಲಂಚದ ಡೀಲ್ ಚರ್ಚಿಸುತ್ತಿರುವ ಸಂದರ್ಭದ ವೀಡಿಯೋವೊಂದನ್ನೂ ಬಿಡುಗಡೆಗೊಳಿಸಿ ಭಾರೀ ಸುದ್ದಿ ಮಾಡಿದ್ದರು.