ಬಿಪಿಎಲ್ ಕಾರ್ಡುದಾರರಿಗೆ ಉಚಿತ ಚಿಕಿತ್ಸೆ ಅಲಭ್ಯ

ಸಾಂದರ್ಭಿಕ ಚಿತ್ರ

ಬೆಂಗಳೂರು : ವಾಜಪೇಯಿ ಆರೋಗ್ಯಶ್ರೀ ಸರಕಾರಿ ವಿಮಾ ಯೋಜನೆಯನ್ವಯ ಚಿಕಿತ್ಸೆಗಾಗಿ ದಾಖಲಾಗಲು ಬಿಪಿಎಲ್ ಕಾರ್ಡುದಾರರಿಗೆ ಸೋಮ ವಾರದಿಂದ ಅಸಾಧ್ಯವಾಗಲಿದೆ. ಈ ಯೋಜನೆಯನ್ವಯ ಸರಕಾರವು ಆಸ್ಪತ್ರೆಗಳಿಗೆ ಇನ್ನೂ ರೂ 86.71 ಕೋಟಿ ಬಾಕಿ ಮೊತ್ತ ಪಾವತಿಸಬೇಕಿದೆ.
ಸುವರ್ಣ ಆರೋಗ್ಯ ಟ್ರಸ್ಟ್ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಕಳೆದ ಕೆಲ ಸಮಯದಿಂದ ಈ ವಿಚಾರದಲ್ಲಿ ಎದ್ದಿರುವ ವಿವಾದಕ್ಕೆ ಪರಿಹಾರ ಸಿಗುವ ಲಕ್ಷಣಗಳು ಕಾಣುತ್ತಿಲ್ಲವಾಗಿದ್ದು ಎಪಿಎಲ್ ಕಾರ್ಡುದಾರರು ಹಾಗೂ ರಾಜ್ಯ ಸರಕಾರಿ ಉದ್ಯೋಗಿಗಳು ಕೂಡ ಇತರ ಯೋಜನೆಗಳನ್ವಯ ಚಿಕಿತ್ಸೆ ಪಡೆಯುವುದು ಅಸಾಧ್ಯವಾಗಿದೆ.
ಸದ್ಯಕ್ಕೆ ಬಾಕಿಯಿರುವ ಮೊತ್ತದಲ್ಲಿ ರೂ 60.64 ಕೋಟಿ ಖಾಸಗಿ ಆಸ್ಪತ್ರೆಗಳಿಗೆ ಸಂದಾಂiÀiವಾಗಬೇಕಿದ್ದರೆ ಉಳಿದ ರೂ 26.07 ಕೋಟಿ ಸರಕಾರಿ ಆಸ್ಪತ್ರೆಗಳಿಗೆ ಸರಕಾರ ನೀಡಬೇಕಾಗಿದೆ.
ಈ ವಿಚಾರದ ಬಗ್ಗೆ ಚರ್ಚಿಸಲು ಆರೋಗ್ಯ ಸೇವಾ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ಇಂದು ಆರೋಗ್ಯ ಸಚಿವ ಕೆ ಆರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಲಿದ್ದಾರೆ.
“ಆಸ್ಪತ್ರೆಗಳಿಗೆ ಹಣ ಬಾಕಿಯಿರುವ ವಿಚಾರವನ್ನು ನಾವು ಅಲ್ಲಗಳೆಯುವುದಿಲ್ಲ. ಆದರೆ ಸರಕಾರದ ಯೋಜನೆಯನ್ವಯ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ನಿರಾಕರಿಸುತ್ತಿರುವ ವಿಚಾರದ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಿದೆ” ಎಂದು ಸಚಿವರು ತಿಳಿಸಿದ್ದಾರೆ.