ಕೋಳಿ ಮೇಲೋ ಬಾಲಕನ ಜೀವ ಮೇಲೋ

ಇತ್ತೀಚೆಗೆ ಬಾವಿಗೆ ಬಿದ್ದ ಕೋಳಿ ಮೇಲೆತ್ತಲು ಬಕೆಟಿನಲ್ಲಿ ಬಾಲಕನನ್ನು ಬಾವಿಗಿಳಿಸಿ ಕೋಳಿ ರಕ್ಷಣೆ ಮಾಡಿದ ಆಘಾತಕಾರಿ ವೀಡಿಯೋ ವಾಟ್ಸಪ್ಪಿನಲ್ಲಿ ವೈರಲ್ ಆಗಿ ಎಲ್ಲಾ ದಿನ ಪತ್ರಿಕೆಗಳಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ
ಏನಿದು  ಜುಜುಬಿ ಮೊತ್ತದ ಕೋಳಿಯನ್ನು ಬಾವಿಯಿಂದ ಮೇಲೆತ್ತಲು ಬಾಲಕನನ್ನು ಬಾವಿಗಿಳಿಸುವುದೇ  ಇದೊಂದು ಹೆಂಗಸರ ಧೈರ್ಯವೇ, ಕೌರ್ಯವೇ ಅಥವಾ ಬಾಲಕನ ಶೌರ್ಯವೇ  ಬಾಲಕನನ್ನು ಬಕೆಟಿಗೆ ಹಗ್ಗ ಕಟ್ಟಿ ಕೋಳಿಗೋಸ್ಕರ ಇಳಿಸಿದ್ದೇ ಮಹಿಳೆಯರು. ಸಣ್ಣ ಬಾಲಕನನ್ನು ಬಾವಿಗೆ ಇಳಿಸುವುದು ಅಪಾಯಕಾರಿ ಹಾಗೂ ಹುಡುಗನ ಜೀವಕ್ಕೆ ಕುತ್ತು ತರುವ ಪರಿಸ್ಥಿತಿಯ ಬಗ್ಗೆ ಅಲ್ಲಿನ ಹೆಂಗಸರಿಗೆ ಹಾಗೂ ಇತರರಿಗೆ ಪರಿಜ್ಞಾನ ಬೇಡವೇ  ಕೋಳಿಯ 200-300 ರೂ ಬೆಲೆಗಿಂತ ಬಾಲಕನ ಜೀವದ ಬೆಲೆ ಅಲ್ಪವೇ  ಒಂದು ವೇಳೆ ಏನಾದರೂ ಅನಾಹುತವಾಗಿದ್ದರೆ ರೋಧನೆ ಮಾಡುವವರು ಇವರೇ. ಹಾಗಾಗಿ ಕೋಳಿಗಾಗಿ ಇಂತಹ ರಿಸ್ಕ್ ಕೆಲಸ ಯಾಕಾಗಿ
ಇತ್ತೀಚೆಗಿನ ಕೆಲವು ಬಾವಿಗಿಳಿದ ಪ್ರಕರಣಗಳಲ್ಲಿ ಆಮ್ಲಜನಕ ಕೊರತೆಯಿಂದ ವಿಷಗಾಳಿಯಿಂದ ಸತ್ತಿದ್ದಾರೆ. ವಿಷಯ ಹೀಗಿರುವಾಗ ಹುಡುಗನನ್ನು ಬಾವಿಗಿಳಿಸಿ ಏನು ಮಹತ್ವದ ಕಾಯ ಸಾಧಿಸಿದಂತಾಯಿತು  ಹಗ್ಗ ತುಂಡಾಗಿಯೋ, ಬಕೆಟ್ ವಾಲಿಯೋ, ಹುಡುಗನ ಕೈ ಜಾರಿಯೋ ಏನಾದರೊಂದು ಅನಾಹುತವಾಗಿದ್ದರೆ ಕಥೆ ಏನಾಗುತ್ತಿತ್ತು  ಬಾಲಕನನ್ನು ಬಾವಿಗಿಳಿಸುವ ದೃಶ್ಯವನ್ನು ವೀಡಿಯೋ ಮಾಡಿದ್ದು ನೋಡುವಾಗ
ಇದೊಂದು ಮಕ್ಕಳಾಟಿಗೆ ಎಂಬಂತೆ ಭಾಸವಾಗುತ್ತಿದೆ. ಮಕ್ಕಳ ಜೀವದ ಬಗ್ಗೆ ಇಂತಹ ಚಿಲ್ಲರೆ ಬುದ್ಧಿ ಯಾರಿಗೂ ಬೇಡ. ಕೋಳಿಗೆ ಬೆಲೆ ಇದೆ. ಮಕ್ಕಳ ಜೀವಕ್ಕೆ ಬೆಲೆ ಇಲ್ಲದಂತೆ ಯಾರೂ ಹೀಗೆ ಮಾಡಬೇಡಿ

  • ಜೆ ಎಫ್ ಡಿ’ಸೋಜ  ಅತ್ತಾವರ