ಬಾಯ್‍ಫ್ರೆಂಡಿಗೆ ಬಾಯಿಯ ಅಲ್ಸರ್ ಇದೆ

ಪ್ರ : ಅವನು ನನ್ನ ಬಾಯ್‍ಫ್ರೆಂಡಾಗಿ ಎರಡು ವರ್ಷಗಳಾದವು. ಒಳ್ಳೆಯ ಹುಡುಗ. ಜಾಲಿಯಾಗಿ ಇರುತ್ತಾನೆ. ಹುಡುಗಿಯರ ಬಗ್ಗೆ ಅತೀವ ಗೌರವ. ಹೆಣ್ಣು ಮಕ್ಕಳಿಗಂತೂ ಅವನನ್ನು ಕಂಡರೆ ತುಂಬಾ ಮಮತೆ. ಎಲ್ಲರನ್ನೂ ಸಿಸ್ಟರ್ಸ್ ತರಹ ನೋಡುವ ಅವನ ಸ್ವಭಾವ ನನಗೆ ತುಂಬಾ ಇಷ್ಟವಾಯಿತು. ನಾನಾಗಿಯೇ ಅವನನ್ನು ಪ್ರೀತಿಸಿದೆ. ಅವನೂ ನನ್ನ ಪ್ರೀತಿಯನ್ನು ಒಪ್ಪಿಕೊಂಡ. ನಾವಿಬ್ಬರೂ ಕಪಲ್ಸ್ ತರಹ ಇದ್ದೇವೆ. ಅವನದು ಒಂದೇ ಕೆಟ್ಟ ಗುಣ ಅಂದರೆ ತನ್ನ ಆರೋಗ್ಯದ ಬಗ್ಗೆ ಕೇರೇ ಕೊಡುವುದಿಲ್ಲ. ಅದೂ ಅಲ್ಲದೇ ಅವನಿಗೆ ಡ್ರೆಸ್ಸಿಂಗ್ ಸೆನ್ಸ್ ಸ್ವಲ್ಪವೂ ಇಲ್ಲ. ಸಿಕ್ಕ ಡ್ರೆಸ್ ಹಾಕಿಕೊಂಡು ಕೆದರಿದ ಕೂದಲಿನಲ್ಲಿ ಇರುತ್ತಾನೆ. ಆದರೂ ಸ್ವಲ್ಪ ಮುಗುಳ್ನಕ್ಕರೂ ಬೀಳುವ ಆ ಡಿಂಪಲ್ ಬಾಯ್ ಅಂದರೆ ಎಲ್ಲರಿಗೂ ಇಷ್ಟ. ನಾನೂ ಅವನಿಗೆ ಮಾರು ಹೋಗಿದ್ದು ಅದಕ್ಕೇ. ಆದರೆ ಈಗೀಗ ಅವನು ತನ್ನ ಬಗ್ಗೆ ಸ್ವಲ್ಪವೂ ಕಾಳಜಿ ಕೊಡದ ಬಗ್ಗೆ ಸಿಟ್ಟು ಬರುತ್ತಿದೆ. ಕೆಲವು ತಿಂಗಳಿಂದ ಅವನ ಬಾಯಿಯಲ್ಲಿ ಅಲ್ಸರ್ ಆಗಿದೆ. ಅವನು ಅದನ್ನು ಗುಣಪಡಿಸಿಕೊಳ್ಳುವ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ. ಡಾಕ್ಟರ್ ಹತ್ತಿರ ಹೋಗು ಅಂದರೂ ಕೇಳುತ್ತಿಲ್ಲ. ಅವನ ಬಾಯಿಯ ಹುಣ್ಣಿನಿಂದಾಗಿ ಈಗ ಅವನನ್ನು ಕಿಸ್ ಮಾಡಲೂ ಆಗುತ್ತಿಲ್ಲ. ಅವನು ನನ್ನ ಮಾತು ಕೇಳದ ಕಾರಣ ಸಿಟ್ಟು ಮಾಡಿಕೊಂಡು ಒಂದು ವಾರದಿಂದ ಅವನ ಹತ್ತಿರ ಮಾತೂ ಬಿಟ್ಟಿದ್ದೇನೆ. ಅವನಿಗೆ ನಾನು ಬೇಕಾದರೆ ಡಾಕ್ಟರ್ ಹತ್ತಿರ ಮೊದಲು ಹೋಗಿ ಬಾಯಿಯ ಅಲ್ಸರ್ ಗುಣ ಪಡಿಸಿಕೋ ಅಂತ ತಾಕೀತು ಮಾಡಿದ್ದೇನೆ. ನಾನು ತುಂಬಾ ಹಾರ್ಷ್ ಅಂತ ಅವನಂದುಕೊಂಡಿರಬಹುದೇ?

ಉ : ಅವನಿಗೆ ಆರೊಗ್ಯ ಮತ್ತು ಶುಚಿತ್ವದ ಬಗ್ಗೆ ಭೋದನೆ ಮಾಡುವ ಅಗತ್ಯ ಖಂಡಿತಾ ಇದೆ. ಹೈಸ್ಕೂಲಿನವರೆಗೆ ಹಲವು ಹುಡುಗರು ಆರೊಗ್ಯ ಮತ್ತು ಶುಚಿತ್ವದ ಬಗ್ಗೆ ಕೇರ್‍ಲೆಸ್ ಇರುತ್ತಾರೆ. ಅವರಿಗೆ ಆಟ ಮತ್ತು ಮಸ್ತಿ ಮಾಡುವ ಬಗ್ಗೆಯೇ ಗಮನವಿರುತ್ತದೆ. ಆದರೆ ಒಮ್ಮೆ ಕಾಲೇಜು ಮೆಟ್ಟಿಲು ಹತ್ತಿದ ನಂತರ ಹುಡುಗಿಯರನ್ನು ಇಂಪ್ರೆಸ್ ಮಾಡಲಾದರೂ ಸ್ವಲ್ಪ ಶಿಸ್ತಿನಿಂದ ಇರುತ್ತಾರೆ. ಆದರೆ ಕೆಲವು ಹುಡುಗರು ಟೀನೇಜ್ ದಾಟುವವರೆಗೂ ಹಾಗೇ ಇರುತ್ತಾರೆ. ಬಹುಶಃ ನಿಮ್ಮ ಹುಡುಗನು ಅದೇ ಕೆಟಗರಿಯವನು. ಅಂತವರಿಗೆ ಸ್ವಲ್ಪ ಸ್ಟ್ರಿಕ್ಟ್ ಇರುವ ಸಂಗಾತಿಯೇ ಬೇಕು. ನೀವು ಅವನಿಗೆ ವಾರ್ನ್ ಮಾಡಿದ್ದು ಒಳ್ಳೆಯದೇ ಆಯಿತು. ಅವನು ತನ್ನ ಬಾಯಿಯ ಅಲ್ಸರನ್ನು ಈಗಲೇ ಗುಣ ಪಡಿಸಿಕೊಳ್ಳದಿದ್ದರೆ ಮುಂದೆ ಬೇರೆ ರೀತಿಯ ಸಮಸ್ಯೆಗಳಿಗೂ ಅದು ಕಾರಣವಾಗಬಹುದು. ಅಂತಹ ಹುಡುಗರನ್ನು ದಾರಿಗೆ ತರಲು ಇಮೋಶನಲ್ ಡೈಲಾಗ್ಸ್‍ಗಳೂ ಹೆಲ್ಪ್ ಆಗುತ್ತವೆ. ನೀವು ಅವನನ್ನು ತುಂಬಾ ಪ್ರೀತಿಸುತ್ತಿರುವುದಾಗಿಯೂ ಅವನು ಬಾಯಿಹುಣ್ಣಿನಿಂದ ಆ ರೀತಿ ನರಳುತ್ತಿರುವುದನ್ನು ನೋಡಿದರೆ ನಿಮಗೆ ಸಂಕಟವಾಗುವುದಾಗಿಯೂ ಸ್ವಲ್ಪ ಮೊಸಳೆ ಕಣ್ಣೀರು ಸುರಿಸಿ. ಅಂತೂ ಹೇಗಾದರೂ ಮಾಡಿ ಅವನನ್ನು ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿ ಅವನ ಕಾಯಿಲೆಯನ್ನು ಮೊದಲು ಗುಣಪಡಿಸಿ.