ಗಡಿನಾಡ ಕನ್ನಡಿಗರು ಸವಲತ್ತುಗಳಿಂದ ವಂಚಿತರಾಗುತಿದ್ದಾರೆ ಶಾಲಿಯಾನ್

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು :  ಕರ್ನಾಟಕದ ಭಾಗವಾಗಬೇಕಾದ ನಾವು ಇಂದು ಕೇರಳದಲ್ಲಿ ಉಳಿದುಕೊಂಡಿದ್ದೇವೆ  ಕೇರಳದಲ್ಲಿ ಉಳಿದುಕೊಂಡರೂ ನಮಗೆ ಭಾಷಾ ಅಲ್ಪಸಂಖ್ಯಾತರಿಗೆ ಕೊಡಬೇಕಾದ ಎಲ್ಲಾ ಸವಲತ್ತುಗಳನ್ನು ಎರಡೂ ರಾಜ್ಯಗಳ ಸರಕಾರ ಕೊಡಬೇಕಾಗಿದೆ  ಆದರೆ ಕೊಡುತ್ತಿದೆಯಾ ಎಂಬ ಪ್ರಶ್ನೆ ನಮ್ಮ ಮುಂದಿದೆ  ಸುಮಾರು ವರ್ಷಗಳಿಂದ ಗಡಿನಾಡ ಕನ್ನಡಿಗರಾದ ನಾವು ಕನ್ನಡತನವನ್ನು ಉಳಿಸಲು ನಿರಂತರ ಹೋರಾಟದ ಹಾದಿಯಲ್ಲಿದ್ದೇವೆ  ಎಂದು ಕರ್ನಾಟಕ ನಾಟಕ ಅಕಾಡಮಿ ಸದಸ್ಯ ಉಮೇಶ್ ಎಂ ಶಾಲಿಯಾನ್ ಹೇಳಿದರು
ಅವರು ಕಾಸರಗೋಡು ಪಯಸ್ವನಿ ವತಿಯಿಂದ ಕಾಸರಗೋಡು ನಾಗರಕಟ್ಟೆ ಕೊರಕ್ಕೋಡಿನಲ್ಲಿ ನಡೆದ ಗಡಿನಾಡ ಸಂಸ್ಕೃತಿ ಉತ್ಸವದ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು  ಚಿತ್ರ ನಟರು  ನಿರ್ದೇಶಕರು  ಹಲವರು ಉಪಸ್ಥಿತರಿದ್ದರು  ನೃತ್ಯ ವೈಭವ  ಛಧ್ಮವೇಷ ಏಕಪಾತ್ರಾಭಿನಯ  ನಾಟಕ  ಗಾಯನ ಸೇರಿದಂತೆ ಹಲವು ಕಾರ್ಯಕ್ರಮಗಳು ಮನ ರಂಜಿಸಿದವು