ಎಸ್ಬಿಐ ಕಾಸರಗೋಡು ಶಾಖೆಗೆ ಬಾಂಬ್ ಬೆದರಿಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಕಾಸರಗೋಡು ಶಾಖೆಗೆ ಪಾರ್ಸೆಲ್ ಮೂಲಕ ಬಾಂಬ್ ಬೆದರಿಕೆಯುಂಟಾಗಿ ಭೀತಿಯ ವಾತಾವರಣ ಸೃಷ್ಟಿಯಾಯಿತು.

ನಗರದಲ್ಲಿ ಕಾರ್ಯಾಚರಿಸುತ್ತಿರುವ ಎಸ್ಬಿಐಗೆ ಅಂಚೆ ಮೂಲಕ ಪಾರ್ಸೆಲ್ ಬಂದಿತ್ತು. ಅದನ್ನು ಕಂಡು ಶಂಕೆಗೊಂಡ ಬ್ಯಾಂಕ್ ಮ್ಯಾನೇಜರ್ ತಕ್ಷಣ ಪೆÇಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಆಗಮಿಸಿದ ಪೆÇಲೀಸರು ಪಾರ್ಸಲನ್ನು ಪರಿಶೀಲಿಸಿ ಕೂದಲೇ ಬಾಂಬ್ ಸ್ಕ್ವಾಡಿಗೆ ಮಾಹಿತಿ ನೀಡಿದ್ದಾರೆ. ಬಾಂಬ್ ಸ್ಕ್ವಾಡ್ ಆಗಮಿಸಿ ಮೆಟಲ್ ಡಿಟೆಕ್ಟರ್ ಬಳಸಿ ಪಾರ್ಸಲನ್ನು ತಪಾಸಣೆಗೊಳಪಡಿಸಿದಾಗ ಮೊದಲು ಡಿಟೆಕ್ಟರಿನಲ್ಲಿ ಶಬ್ದ ಕೇಳಿ ಬಂತು. ಶ್ವಾನದಳದ ಮೂಲಕ ಪರಿಶೀಲಿಸಿದಾಗಲೂ ಅದು ಪಾರ್ಸಲನ್ನು ಪದೇ ಪದೇ ಮೂಸಿ ನೋಡಿದೆ. ಆಗ ಪೆÇಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳು ಗಾಬರಿಯಾಗಿದ್ದಾರೆ. ಬಳಿಕ ಪಾರ್ಸಲನ್ನು ಬಿಡಿಸಿ ನೋಡಿದಾಗ ತಿನ್ನುವ ಏಳು ಬಿಸ್ಕೆಟ್ ಪತ್ತೆಯಾಗಿದೆ. ಬ್ಯಾಂಕ್ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಯಾರೋ ಸಾಲ ಸಿಗದೆ ಹತಾಶೆಯಿಂದ ಅಧಿಕಾರಿಗಳನ್ನು ಹೆದರಿಸಲ ಪಾರ್ಸಲ್ ಕಳಿಸಿರಬಹುದಾಗಿ ಪೆÇಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

LEAVE A REPLY