ಬೊಳ್ಳೂರು ಅಪಘಾತ ಗಾಯಾಳು ಚೇತರಿಕೆ

ಮೂಲ್ಕಿ : ಇಲ್ಲಿಗೆ ಸಮೀಪದ ಹಳೆಯಂಗಡಿ ಬೊಳ್ಳೂರು ಜಂಕ್ಷನ್ ಬಳಿ ಬಸ್ಸೊಂದು ವಾಹನವನ್ನು ಓವರ್‍ಟೇಕ್ ಮಾಡಿ ರಿಕ್ಷಾಗೆ ಡಿಕ್ಕಿ ಹೊಡೆದು ಆಟೋ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟರೆ ಉಳಿದಂತೆ ರಿಕ್ಷಾದಲ್ಲಿದ್ದ ಇಬ್ಬರು ಮಗು ಸಮೇತ 6 ಮಂದಿ ಗಂಭೀರ ಗಾಯಗೊಂಡು ಮುಕ್ಕ ಆಸ್ಪತ್ರೆಗೆ ದಾಖಲಾಗಿದ್ದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

6sadhik

ಅಪಘಾತದಲ್ಲಿ ಮೃತಪಟ್ಟ ರಿಕ್ಷಾ ಚಾಲಕ ಹಳೆಯಂಗಡಿ ಇಂದಿರಾನಗರ ನಿವಾಸಿ ಸಾಧಿಕ್ (35) ಕಳೆದ ಮೂರುವರೆ ತಿಂಗಳ ಹಿಂದೆ ಮದುವೆಯಾಗಿದ್ದು ಮನೆಯಲ್ಲಿ ಸೂತಕದ ವಾತಾವರಣ ನೆಲೆಸಿದೆ. ಹಳೆಯಂಗಡಿಯಲ್ಲಿ ರಿಕ್ಷಾ ಚಾಲಕನಾಗಿದ್ದುಕೊಂಡು ದುಡಿಯುತ್ತಿದ್ದ ಈತ ಮನೆಗೆ ಆಧಾರಸ್ಥಂಭವಾಗಿದ್ದನು. ಅಪಘಾತದಲ್ಲಿ ಗಾಯಗೊಂಡಿದ್ದ ರಿಕ್ಷಾದಲ್ಲಿ ಹಾಗೂ ಬಸ್ಸಿನಲ್ಲಿದ್ದ ಪ್ರಯಾಣಿಕರಾದ ಪಕ್ಷಿಕೆರೆ ಸಮೀಪದ ಪಂಜ ಉಲ್ಯ ನಿವಾಸಿಗಳಾದ ರೀತಾ (32), ಉಮಾವತಿ (37), ಕಸ್ತೂರಿ ಪೂಜಾರಿ (34), ರೇಣುಕ(28) ಮತ್ತು ಸಣ್ಣ ಮಗು ದಿಶಾನ್ (2), ವೈಭವ್ (8) ಎಂಬವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.