ತೆಪ್ಪ ದುರಂತ : ನೀರುಪಾಲಾದವರ ಶವ ಪತ್ತೆ

 

ನಮ್ಮ ಪ್ರತಿನಿಧಿ ವರದಿ
ಪುತ್ತೂರು : ತಾಲೂಕಿನ ಕಡಬ ಠಾಣಾ ವ್ಯಾಪ್ತಿಯ ಚಾರ್ವಾಕ ಗ್ರಾಮದ ಗುಜ್ಜರ್ಮೆ ಸಮೀಪ ಕುಮಾರಧಾರಾ ಹೊಳೆಯಲ್ಲಿ ತೆಪ್ಪ ಮಗುಚಿ ನೀರುಪಾಲಾಗಿದ್ದ ಕುಂಞಣ್ಣ ಗೌಡ (70) ಹಾಗೂ ಗಣೇಶ್ ಚೊಕ್ಕಾಡಿ (60) ಇವರ ಶವ ಪತ್ತೆಯಾಗಿದೆ.
ತಣ್ಣೀರುಬಾವಿ ಮುಳುಗು ತಜ್ಞರು ಶವಗಳನ್ನು ತೆಪ್ಪ ಅಪಘಾತಕ್ಕೀಡಾದ ಸ್ಥಳದಲ್ಲಿಯೇ ಪತ್ತೆ ಹಚ್ಚಿ ಮೇಲಕ್ಕೆ ತಂದಿದ್ದಾರೆ. ಆಲಂಕಾರು ಗ್ರಾಮದ ಬುಡೇರಿಯಾ ದೈವಸ್ಥಾನದಲ್ಲಿ ನಡೆಯುತ್ತಿದ್ದ ನೇಮೋತ್ಸವಕ್ಕೆ ತೆರಳುತ್ತಿದ್ದ ಕುಂಞಣ್ಣ ಹಾಗೂ ಗಣೇಶ್ ನದಿ ಮಧ್ಯೆ ತೆಪ್ಪದಲ್ಲಿ ತೆರಳುತ್ತಿದ್ದಾಗ ತೆಪ್ಪ ಮಗುಚಿ ಇಬ್ಬರು ನೀರುಪಾಲಾಗಿದ್ದರು.
ನೀರುಪಾಲಾದವರ ಪತ್ತೆಗಾಗಿ ಪುತ್ತೂರು ಅಗ್ನಿಶಾಮಕ ದಳದದವರು ಮತ್ತು ಸ್ಥಳೀಯ ಈಜುಪಟುಗಳು ರಾತ್ರಿಯವರೆಗೂ ಕಾರ್ಯಾಚರಣೆ ಮುಂದುವರಿಸಿದ್ದರು.
ಶುಕ್ರವಾರ ಮುಂಜಾನೆ ತಣ್ಣೀರುಬಾವಿಯ ಮುಳುಗು ತಜ್ಞರು ಆಗಮಿಸಿ ಶವಗಳನ್ನು ಮೇಲಕ್ಕೆತ್ತಿದ ಬಳಿಕ ಶವದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ವಾರೀಸುದಾರರಿಗೆ ಹಸ್ತಾಂತರಿಸಲಾಯಿತು.
ಕಡಬ ತಹಶೀಲ್ದಾರ್ ಬಿ ಲಿಂಗಯ್ಯ, ಆರ್ ಐ ಕೊರಗಪ್ಪ ಹೆಗ್ಡೆ, ಕಡಬ ಠಾಣಾ ಎ ಎಸ್ ಐ ರವಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.