ಕೃಷ್ಣ ನದಿಯಲ್ಲಿ ಪ್ರವಾಸಿ ನಾವೆ ಮುಳುಗಿ 16 ಮಂದಿ ಮೃತ

ಆಂಧ್ರ : ಇಲ್ಲಿನ ಕೃಷ್ಣ ಜಿಲ್ಲೆಯ ಕೃಷ್ಣ ನದಿಯಲ್ಲಿ ಭಾನುವಾರ ಪ್ರವಾಸಿ ನಾವೆಯೊಂದು ಮುಳುಗಿದ ಭಾರೀ ದುರಂತದಲ್ಲಿ 9 ಮಹಿಳೆಯರು ಮತ್ತು ಇಬ್ಬರು ಮಕ್ಕಳ ಸಹಿತ ಒಟ್ಟು 16 ಪ್ರವಾಸಿಗರು ಮೃತಪಟ್ಟಿದ್ದಾರೆ. ಇತರ ಎಂಟು ಮಂದಿ ನಾಪತ್ತೆಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದರು. ನಿನ್ನೆ ಸಂಜೆ ಇಬ್ರಾಹಿಂಪಟ್ಟಣದಲ್ಲಿ ಪ್ರವಾಸಿಗರನ್ನು ಸಾಗಿಸುತ್ತಿದ್ದ ನಾವೆ ಮುಳುಗಿದೆ. ಇದು ಭವಾನಿ ದ್ವೀಪದಿಂದ ಪವಿತ್ರ ಸಂಗಮಕ್ಕೆ ಮರಳುತ್ತಿದ್ದಾಗ ದುರಂತ ಸಂಭವಿಸಿದೆ.