ಮುಂಬೈಯ ಎಲ್ಲ ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯಕ್ಕೆ ಬಿಎಂಸಿ ಆದೇಶ

ಸಾಂದರ್ಭಿಕ ಚಿತ್ರ

ಮುಂಬೈ : ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಎಲ್ಲ ಶಾಲೆಗಳಲ್ಲಿ ವಂದೇ ಮಾತರಂ ಹಾಡುವಂತೆ ಬಿಎಂಸಿ ನಿನ್ನೆ ಶಾಲಾ ಆಡಳಿತಕ್ಕೆ ನೋಟಿಸು ಜಾರಿ ಮಾಡಿದೆ. ಶಿಕ್ಷಣ ಸಂಸ್ಥೆಗಳಲ್ಲಿ ವಂದೇ ಮಾತರಂ ಹಾಡಬೇಕೆಂದು ಮದರಾಸು ಹೈಕೋರ್ಟ್ ಜುಲೈಯಲ್ಲಿ ಹೊರಡಿಸಿರುವ ಆದೇಶನ್ವಯ ಬಿಎಂಸಿ ಈ ಕ್ರಮ ಅನುಸರಿಸಿದೆ.