ಕಪ್ಪು ಹಣ ಸಂಗ್ರಹ : ಕರ್ನಾಟಕ, ಬಿಜೆಪಿಯವರದೇ ಸಿಂಹಪಾಲು

ಬೆಂಗಳೂರು : ನೋಟು ರದ್ದು ಘೋಷಣೆ ಅದ ಮೇಲೆ ಕಾನೂನುಬಾಹಿರ ನಗದು ವ್ಯವಹಾರಗಳ ಕಾರಣದಿಂದಾಗಿ ಕರ್ನಾಟಕದ ಹೆಸರು ದೇಶದಾದ್ಯಂತ ಚಲಾವಣೆಗೆ ಬಂದಿದೆ. ಆದಾಯ ತೆರಿಗೆ ಇಲಾಖೆ ಬಹಿರಂಗಪಡಿಸಿದ ಮಾಹಿತಿ ಪ್ರಕಾರವೇ ಹೇಳುವುದಾದರೆ, ಲೆಕ್ಕಕ್ಕೆ ನೀಡದ ಹಣದ ಪ್ರಕರಣಗಳು ಅತಿ ಹೆಚ್ಚು ಬೆಳಕಿಗೆ ಬಂದಿರುವುದು ಬೆಂಗಳೂರಿನಲ್ಲಿ. ಆದಾಯ ತೆರಿಗೆ ಇಲಾಖೆ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ 400 ಪ್ರಕರಣಗಳು ಬಯಲಿಗೆ ಬಂದಿದ್ದು, 130 ಕೋಟಿ ರೂ ಹಣ ಮತ್ತು ಆಭರಣ ಬೆಳಕಿಗೆ ಬಂದಿದೆ. ಜತೆಗೆ ತೆರಿಗೆಕಳ್ಳರು ತಮ್ಮ ಬಳಿ 2,000 ಕೋಟಿ ರೂ ಇರುವುದಾಗಿ ಒಪ್ಪಿಕೊಂಡಿದ್ದಾರೆ. ಹೊಸ ನೋಟಿನ ದೊಡ್ಡ ಹಗರಣ ಬೆಂಗಳೂರಿನಲ್ಲಿ ನವೆಂಬರ್ 30ರಂದು ಬಯಲಾಯಿತು.

ಸರಕಾರಿ ಅಧಿಕಾರಿಗಳ ಮೇಲಿನ ದಾಳಿಯಲ್ಲಿ 4.7 ಕೋಟಿ ರುಪಾಯಿಯಷ್ಟು ಹೊಸ 2 ಸಾವಿರ ನೋಟುಗಳು ಸಿಕ್ಕಿದ್ದವು. ಜತೆಗೆ ಏಳು ಕೇಜಿ ಚಿನ್ನ, 90 ಲಕ್ಷದಷ್ಟು ಹಳೇ ನೋಟುಗಳು ಕೂಡ ಸಿಕ್ಕಿದವು ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡಿಸೆಂಬರ್ 1ರಂದು ತಿಳಿಸಿದ್ದರು. ಇದರ ಹೊರತಾಗಿ ಅಧಿಕಾರಿಗಳಷ್ಟೇ ಅಲ್ಲ, ಬಿಜೆಪಿ ನಾಯಕರು ಸಹ ಹೊಸ ನೋಟುಗಳೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅಂಥ ಮೂವತ್ತಕ್ಕೂ ಹೆಚ್ಚು ಪ್ರಕರಣಗಳನ್ನು ಜಾರಿ ನಿರ್ದೇಶನಾಲಯಕ್ಕೆ ವಹಿಸಲಾಗಿದೆ ಮತ್ತು ಸಿಬಿಐಗೆ ಕಳಿಸಲಾಗಿದೆ. ಆ ಪೈಕಿ ಬೆಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆ ವಿಭಾಗವು  ನೋಟು ರದ್ದು ಘೋಷಣೆ ಮಾಡಿದ ಮರುದಿನವೇ ರಾಜಸ್ತಾನದ ಬಾರನ್ ಜಿಲ್ಲೆ, ಛಬ್ರಾ ಪುರಸಭೆ ಅಧ್ಯಕ್ಷೆ, ಜಿತೇಂದ್ರ ಕುಮಾರ್ ಸಾಹು ಹಾಗೂ ಆತನ ಪತ್ನಿ ಲಕ್ಷ ರುಪಾಯಿ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದರು. ಒಂದು ಸಾವಿರ ರುಪಾಯಿ ಮುಖಬೆಲೆಯ ಹಳೇ ನೋಟಿನ ಮೂಲಕ ಲಂಚ ಪಡೆಯುತ್ತಿದ್ದರು. ಪಿಂಕಿ ಸಾಹು ಬಿಜೆಪಿಯವರು. ನವೆಂಬರ್ 2014ರಲ್ಲಿ ಛಬ್ರಾ ಪುರಸಭೆ ಅಧ್ಯಕ್ಷೆಯಾಗಿದ್ದರು.

ತಮಿಳುನಾಡು ಸೇಲಂನ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಅರುಣ್ 20.25 ಲಕ್ಷ ರುಪಾಯಿ ಜತೆಗೆ ಪೆÇಲೀಸರಿಗೆ ಸಿಕ್ಕಿಬಿದ್ದ. 2000 ಮುಖಬೆಲೆಯ 926 ನೋಟು, 100ರ 1530 ನೋಟು ಹಾಗೂ ಐವತ್ತು ಮುಖಬೆಲೆಯ ಒಂದು ಸಾವಿರ ನೋಟು ಸಿಕ್ಕಿತ್ತು.

ಪಶ್ಚಿಮ ಬಂಗಾಲದ ಬಿಜೆಪಿ ಮುಖಂಡ ಮನೀಶ್ ಶರ್ಮಾ 2000 ನೋಟುಗಳ ಮೂವತ್ಮೂರು ಲಕ್ಷ ರುಪಾಯಿ ತೆಗೆದುಕೊಂಡು ಹೋಗುವಾಗ ಪೆÇಲೀಸರು ವಶಪಡಿಸಿಕೊಂಡರು. ಏಳು ಪಿಸ್ತೂಲು, 89 ಸುತ್ತಿನ ಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಯಿತು.

ಮಹಾರಾಷ್ಟ್ರದ ಬಿಜೆಪಿ ಸಚಿವ ಸುಭಾಷ್ ದೇಶಮುಖ್ ವರಿಂದ ನವೆಂಬರ್ 18ರಂದು 91.50 ಲಕ್ಷ ರೂ ಮೌಲ್ಯದ  1000, 500ರ ನೋಟುಗಳನ್ನು ವಶಪಡಿಸಿಕೊಳ್ಳಲಾಯಿತು. ಗಾಜಿಯಾಬಾದಿನಲ್ಲಿ ಬಿಜೆಪಿ ಮುಖಂಡರೊಬ್ಬರಿಂದ ನವೆಂಬರ್ 9ರಂದು ಮೂರು ಕೋಟಿ ರುಪಾಯಿಗಳನ್ನು ವಶಪಡಿಸಿಕೊಳ್ಳಲಾಯಿತು.