ಮಳವೂರಿನಲ್ಲಿ ವಾಮಾಚಾರದ ಕುರುಹು ಪತ್ತೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಹೊರವಲಯ ಮಳವೂರು ಗ್ರಾಮ ಪಂಚಾಯತ್ ಸಮೀಪ ವಾಮಾಚಾರ ನಡೆಸಿರುವುದು ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ.

ಕಾವೂರಿನ ಮಳವೂರಿನ ಪಂಚಾಯತ್ ಬಳಿ ವಾಮಾಚಾರ ನಡೆದಿದ್ದು, ತಡರಾತ್ರಿ ದುಷ್ಕರ್ಮಿಗಳು ಇದನ್ನು ನಡೆಸಿರುವುದಾಗಿ ತಿಳಿದುಬಂದಿದೆ. ತೆಂಗಿನ ಕಾಯಿ, ಲಿಂಬೆ ಹಾಗೂ ಕುಂಕುಮ ಮತ್ತು ಇತರೆ ದವಸ ಧಾನ್ಯಗಳಿಂದ ವಾಮಾಚಾರ ನಡೆಸಿದ್ದು, ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷ ಗಣೇಶ್ ಭೇಟಿ ನೀಡಿ ತದಬಳಿಕ ಇದನ್ನು ತೆರವುಗೊಳಿಸಲಾಯಿತು. ಇದನ್ನು ಯಾರು, ಎಷ್ಟು ಹೊತ್ತಿಗೆ ನಡೆಸಿದ್ದಾರೆ ಎನ್ನುವ ಬಗ್ಗೆ ಯಾರಿಗೂ ಮಾಹಿತಿ ಇಲ್ಲ.