ನೀಚ ಶಕ್ತಿ ಆಹ್ವಾನಿಸಿ ಉಪದ್ರವ ಕೊಡುತ್ತಿದ್ದಾರೆ

ಪಲಿಮಾರಿನ ಕೋಟೆ ಎಂಬಲ್ಲಿ ಮಂತ್ರವಾದಿ ಮನೆಯೊಂದಿದೆ. ಆ ಮನೆಯಲ್ಲಿ ಗಂಡ ಹೆಂಡತಿ ಇದ್ದಾರೆ. ಅವರು ಮತ್ತು ಸಂಬಂಧಕರು ಕೂಡಿಕೊಂಡು ನೀಚ ಶಕ್ತಿಯನ್ನು ಆಹ್ವಾನಿಸಿ ನೆರೆಕೆರೆಯವರಿಗೆ ಕಿರುಕುಳ ಕೊಡುತ್ತಾರೆ. ಕಿರುಕುಳ ಕೊಟ್ಟು ಬಾಯಿಗೆ ಬಂದ ಅಶ್ಲೀಲ ಪದಗಳನ್ನು ಹೇಳಿ ಬಯ್ಯುತ್ತಾರೆ. ಅವರ ಜಮೀನನ್ನು ಒಳಗೆ ಹಾಕಲು ಪ್ರಯತ್ನ ಮಾಡುತ್ತಾರೆ.
ಪಕ್ಕದವರ ಮನೆಯಲ್ಲಿ ಸಾಕಿದ ಒಟ್ಟು 16 ನಾಯಿಗಳನ್ನು ಕೊಂದು ಹಾಕಿದ್ದಾರೆ ಮತ್ತು ಪ್ರಾಯದ ವ್ಯಕ್ತಿಯೊಬ್ಬರನ್ನು ನೆಲಕ್ಕೆ ಅಪ್ಪಳಿಸಿ ಕೊಂದಿದ್ದಾರೆ.
ನಾನು ಮದುವೆಯ ಡೆಕೋರೇಷನ್ ಮಾಡುತ್ತಿದ್ದೆ. ಅದನ್ನು ಬಂದ್ ಮಾಡಿಸಿದ್ದಾರೆ  ನಮಗೆ ಒಂದು ಸಣ್ಣ ಅಂಗಡಿ ಉಂಟು ಆ ಅಂಗಡಿಯಲ್ಲಿ ವ್ಯಾಪಾರ ಮಾಡದ ಹಾಗೆ ಅಂಗಡಿಯನ್ನು ಬಿಟ್ಟು ಹೋಗಬೇಕು ಎಂದು ತಾಕೀತು ಮಾಡಿದ್ದಾರೆ. ಮನೆಯಲ್ಲಿ ಶಾಂತಿ ಸಮಾಧಾನ ಇಲ್ಲ. ಮನೆಯ ವಸ್ತು ಎಲ್ಲ ಹಾಳು ಮಾಡುತ್ತಾರೆ

  • ಜೆ  ಕುಟಿನೊ ಮತ್ತು ಎಲ್ ಕುಟಿನೊ
    ಪಲಿಮಾರು