ಹುತಾತ್ಮ ಯೋಧನ ಬಗ್ಗೆ ಬಿಜೆಪಿ ಒಣ ಅಭಿಮಾನ

ಪಾಕ್ ಗಡಿಯಲ್ಲಿ ಇತ್ತೀಚೆಗೆ ಪಾಕ್ ಯೋಧರಿಂದ ಶಿರಚ್ಛೇದಕ್ಕೊಳಗಾಗಿದ್ದರೆನ್ನಲಾದ ಹುತಾತ್ಮ ಯೋಧ ಪ್ರೇಮಸಾಗರನ ಮನೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಸಾಂತ್ವನ ಹೇಳಲು ಆಗಮಿಸುವ ಸಂದರ್ಭ ಆ ಯೋಧನ ಮನೆಗೆ ಎಸಿ  ಸೋಫಾ  ಫ್ರಿಜ್ ನೆಲಕ್ಕೆ ಹಾಸುವ ರತ್ನಗಂಬಳಿ ಮುಂತಾದ ತಂದಿದ್ದ ಎಲ್ಲಾ ಐಷಾರಾಮಿ ವಸ್ತುಗಳಲ್ಲಿ ಒಂದನ್ನೂ ಬಿಡದೇ ಕಿತ್ತೊಯ್ದರು
ಮಹಾ ದೇಶಭಕ್ತಿ ಫೋಸ್ ಕೊಡುವ ಯೋಗಿ ಮತ್ತವರ ಅಧಿಕಾರಿಗಳ ಹೃದಯಹೀನ ಆಷಾಢಭೂತಿತನಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕೆ  ಮಾತು ಮಾತಿಗೆ ಭಾರತದ ಗಡಿ ಕಾಯುವ ಯೋಧರ ಬಗ್ಗೆ ಒಣ ಅಭಿಮಾನ ಪ್ರದರ್ಶಿಸುವ ಬಿಜೆಪಿಯವರಿಗೆ ಮೃತ ಯೋಧನ ಕುಟುಂಬದ ಬಗ್ಗೆ ಇರುವ ಉದಾಸೀನತೆ ಎಷ್ಟೆಂದು ಇದರಿಂದ ಅರ್ಥವಾಗುತ್ತದೆ

  • ಕೆ ಲಕ್ಷ್ಮೀಕಾಂತ್ ರಾವ್
    ಕೊಟ್ಟಾರ, ಮಂಗಳೂರು