ಬಿಜೆಪಿ ಕಾರ್ಯಕರ್ತನ ಇರಿದು ಕೊಲೆ

ಕೊಲೆಯಾದ ಸಂತೋಷ್

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬಿಜೆಪಿ ಕಾರ್ಯಕರ್ತನೊಬ್ಬನನ್ನು ತಂಡವೊಂದು ಮನೆಗೆ ನುಗ್ಗಿ ಇರಿದು ಕೊಲೆಗೈದಿದೆ. ತಲಶ್ಯೇರಿ ಅಂಡಲೂರು ಮುಲ್ಲಪ್ರಂ ಕೋವಿಗೆ ಸಮೀಪದ ಸಂತೋಷ್ (52) ಕೊಲೆಯಾದ ವ್ಯಕ್ತಿ.

ಬುಧವಾರ ತಡರಾತ್ರಿ ಮನೆಗೆ ನುಗ್ಗಿದ ತಂಡ ಇರಿದು ಕೊಲೆಗೈದಿದೆ. ಒಂದು ದಿನದ ಹಿಂದೆ ಬ್ರಾಣಲ್ ಕಾಲೇಜಿನಲ್ಲಿ ಎಸ್ ಎಫ್ ಐ ಕಾರ್ಯಕರ್ತನೊಬ್ಬ ಇರಿತಕ್ಕೊಳಗಾಗಿದ್ದ. ಇದರ ಪ್ರತೀಕಾರವಾಗಿ ಈ ಕೊಲೆ ನಡೆದಿರಬಹುದಾಗಿ ಶಂಕಿಸಲಾಗಿದೆ.

ತಲಶ್ಯೇರಿಯ ಟೈಲ್ಸ್ ಅಂಗಡಿಯೊಂದರ ಉದ್ಯೋಗಿಯಾಗಿದ್ದರು ಕೊಲೆಗೀಡಾದ ಸಂತೋಷ್. ಘಟನೆಯ ಹಿನ್ನೆಲೆಯಲ್ಲಿ ಕಣ್ಣೂರು ತಲಶ್ಯೇರಿಗಳಲ್ಲಿ ಬಿಗು ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.