ಹರ್ಷ ಮೊಯ್ಲಿ ಬೇನಾಮಿ ಆಸ್ತಿಯ ವಿರುದ್ಧ ಬಿಜೆಪಿ ಹೋರಾಟ : ಯಡ್ಡಿ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : “ಕೇಂದ್ರ ಸರಕಾರ ಬೇನಾಮಿ ಆಸ್ತಿ ಕಾಯಿದೆ ಜಾರಿಗೊಳಿಸಲು ಮುಂದಾಗಿದ್ದು, ಇದರಿಂದ ಕಾಂಗ್ರೆಸ್ಸಿಗರಲ್ಲಿ ಈಗಾಗಲೇ ನಡುಕ ಶುರುವಾಗಿದೆ” ಎಂದು ಬಿಜೆಪಿ ನಾಯಕ ಯಡ್ಯೂರಪ್ಪ ಹೇಳಿದ್ದಾರೆ. ಕಾರ್ಕಳದಲ್ಲಿ ಪರಿವರ್ತನಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, “ವೀರಪ್ಪ ಮೊಯ್ಲಿ ಮಗ ಹರ್ಷ ಮೊಯ್ಲಿ ವಿದೇಶದಲ್ಲಿ ಬೇನಾಮಿ ಆಸ್ತಿಹೊಂದಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದರ ಬಗ್ಗೆ ಹೋರಾಟ ಕೈಗೆತ್ತಿಕೊಳ್ಳಲಿದ್ದೇವೆ” ಎಂದರು.

ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, “ಕಾರ್ಕಳದಿಂದ 35 ವರ್ಷ ಕಾಂಗ್ರೆಸ್ ಶಾಸಕರು ಹಾಗೂ ಮುಖ್ಯಮಂತ್ರಿಯಾದವರು ಈ ಭಾಗಕ್ಕೆ ನೀಡಿರುವ ಕೊಡುಗೆ ಶೂನ್ಯ, ತನ್ನ ಅತ್ಯಲ್ಪ ಶಾಸಕತ್ವದ ಅವಧಿಯಲ್ಲಿ ನೂರಾರು ಅಭಿವೃದ್ಧಿ ಕಾಮಗಾರಿ ನಡೆಸಿರುವ ತೃಪ್ತಿ ನನಗಿದೆ” ಎಂದರು