ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಬಿಜೆಪಿಗೆ ಎಚ್ಚರಿಕೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕರ್ನಾಟಕದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಅಂತರದ ಗೆಲುವು ಪಡೆದಿರುವುದು ಬಿಜೆಪಿಗೆ ಮುನ್ನೆಚ್ಚರಿಕೆ ಸೂಚನೆಯಾಗಿದ್ದು, ಒಂದು ವ್ಯಕ್ತಿ ಅಥವಾ ಹೇಳಿಕೆಗಳ ಮೂಲಕ ಎಂದೆಂದಿಗೂ ಗೆಲುವೆಂಬುದನ್ನು ಖಚಿತಪಡಿಸುವಂತಿಲ್ಲ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಅವರ ಮಂತ್ರಿಮಂಡಲ ವಿವಿಧ ಕಿರುಕುಳ, ಆರೋಪಗಳ ಹೊರತಾಗಿಯೂ ಜಯಗಳಿಸಿರುವುದು ಪಕ್ಷದ ವರ್ಚಸ್ಸಿನ ಸೂಚಕವೆಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ ನಾಣಿತ್ತಿಲು ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ನಿರಂತರ ಸುಳ್ಳು ಆರೋಪ ಮತ್ತು ಮುಜುಗರ ತರಿಸುವ ನಡೆಗಳ ಮೂಲಕ ಕರ್ನಾಟಕದ ಕಾಂಗ್ರೆಸ್ ವರ್ಚಸ್ಸನ್ನು ಕುಂದಿಸಲು ಯತ್ನಿಸುವವರಿಗೆ ತಕ್ಕ ಪಾಠ ಇದರಿಂದ ಲಭಿಸಿದೆ. ಪ್ರಜ್ಞಾವಂತ ನಾಗರಿಕರಿಗೆ ರಾಜಕೀಯ ನಿಲುವು, ಆಡಳಿತ ಶೈಲಿಗಳ ಬಗ್ಗೆ ಸ್ಪಷ್ಟ ಅರಿವಿರುತ್ತದೆ. ಈ ಹಿನ್ನೆಲೆಯಲ್ಲಿ ಒಬ್ಬ ವ್ಯಕ್ತಿಯನ್ನು ಗುರಿಯಾಗಿರಿಸಿ ಅಭಿವೃದ್ಧಿಯ ಕಪೆÇೀಲಕಲ್ಪಿತ ಬಾಲಿಶ ಹೇಳಿಕೆಗಳಿಂದಷ್ಟರಿಂದಲೇ ಜನವಂಚನೆ ನಡೆಸುವ ಚಾಳಿ ಹೆಚ್ಚು ಕಾಲ ಬಾಳ್ವಿಕೆ ಬಾರದು” ಎಂದು ಅವರು ತಿಳಿಸಿ, ಸಿದ್ದರಾಮಯ್ಯರ ಆಡಳಿತ ಕ್ರಮಗಳು, ಅನುಷ್ಠಾನ ಗೊಳಿಸಿರುವ ಯೋಜನೆಗಳು ಹೆಚ್ಚು ಜನಪರವಾಗಿರುವುದಕ್ಕೆ ಉಪಚುನಾವಣಾ ಫಲಿತಾಂಶ ಸಾಕ್ಷಿ ಎಂದು ಹೇಳಿದ್ದಾರೆ.