ಕಪ್ಪುಹಣದ ವಿರುದ್ಧ ಬಿಜೆಪಿ ಪ್ರತಿಭಟನೆ

ವೇದಿಕೆಯಲ್ಲಿ ಸಜೀವನ್ ಮಾತನಾಡುತ್ತಿರುವುದು

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಅಪಪ್ರಚಾರ ನಡೆಸಲು ಕೇರಳದ ಎಡ ಬಲ ರಂಗಗಳು ಪ್ರಯತ್ನಿಸುತ್ತಿವೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ವಿ ಕೆ ಸಜೀವನ್ ಹೇಳಿದರು
ಅವರು ಎನ್ ಡಿ ಎ ಆಶ್ರಯದಲ್ಲಿ ಬದಿಯಡ್ಕ ಪೇಟೆಯಲ್ಲಿ ಬಿಜೆಪಿ ವತಿಯಿಂದ ನಡೆಸಲಾದ ಕಪ್ಪು ಹಣದ ವಿರುದ್ಧ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನೋಟು ರದ್ದತಿ ಎಂಬುದು ತುರ್ತು ಶಸ್ತ್ರ ಕ್ರಿಯೆ ಆಗಿದೆ  ಇದರಿಂದಾಗಿ ಕಾಳ ಧನ ಹೊಂದಿದವರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದವರು ಹೇಳಿದರು. ಕೇಂದ್ರದ ನೋಟು ರದ್ದತಿಯಿಂದ ಕಾಳಧನ ಉಪಯೋಗಿಸಲಾಗದ ಕೇರಳದ ಎಡರಂಗ ಸಹಕಾರಿ ಬ್ಯಾಂಕುಗಳನ್ನು ನಿಷ್ಕ್ರಿಯಗೊಳಿಸಿ ಇದಕ್ಕೆ ಕಾರಣ ಕೇಂದ್ರ ಸರಕಾರವೆಂದು ವೃಥಾರೋಪಗೈಯ್ಯುತ್ತಿರುವುದು ಅಸಾಂವಿಧಾನಿಕ ಕ್ರಮವಾಗಿದ್ದು  ರಾಜ್ಯ ಸರಕಾರ ತಕ್ಕ ಪಾಠ ಕಲಿಯಲಿದೆ ಎಂದು ತಿಳಿಸಿದ ಅವರು  ಸಮರ್ಪಕ ಆರ್ಥಿಕ ರಾಷ್ಟ್ರವಾಗಿಸುವ ಯತ್ನವನ್ನು ವಿರೋಧಿಸುವವರು ದೇಶ ದ್ರೋಹಿಗಳೆಂದು ತಿಳಿಸಿದರು.
ಜನ ಸಾಮಾನ್ಯರಿಗೆ ಕರೆನ್ಸಿ ರದ್ದತಿ ಯಾವುದೇ ಪ್ರತಿಕೂಲ ಪರಿಣಾಮ ಬೀರದೆಂದು ಭರವಸೆ ನೀಡಿದ ಅವರು  ಸಮಗ್ರ ಅಭಿವೃದ್ಧಿಯ ಕಾಲ ಸನ್ನಿಹಿತವಾಗಿದೆಯೆಂದು ತಿಳಿಸಿದರು