ಐಪಿಎಲ್ ಬೆಟ್ಟಿಂಗ್ : ಬಿಜೆಪಿ ಸಂಸದ ಪುತ್ರನ ವಿರುದ್ಧ ಕೇಸು

ಗೋದ್ರಾ : ಕಳೆದ ರಾತ್ರಿ ಗೋದ್ರಾ ತೆಹಶೀಲಿನ ಮೆಹಲೋಲ್ ಗ್ರಾಮದಲ್ಲಿರುವ ಪಂಚಮಹಲ್ ಬಿಜೆಪಿ ಸಂಸದ ಪ್ರಭಾತ್ ಸಿನ್ಹಾ ಚೌವಾಣ್ ಪುತ್ರನ ಮನೆಗೆ ದಾಳಿ ಮಾಡಿದ ಪೊಲೀಸರು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಬಂಧಿಸಿ, ಸಂಸದನ ಪುತ್ರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿ ವೇಳೆ ಪೊಲೀಸರು ಸುಮಾರು 1.13 ಲಕ್ಷ ರೂ ಮೌಲ್ಯದ ಕೆಲವು ಮೊಬೈಲ್ ಹ್ಯಾಂಡ್‍ಸೆಟ್, ಒಂದು ಎಲ್‍ಸಿಡಿ ಟೀವಿ ಸೆಟ್ ಮತ್ತು ಲ್ಯಾಪ್‍ಟಾಪ್ ವಶಪಡಿಸಿಕೊಂಡಿದ್ದರು.